ಸಾಂಸ್ಕೃತಿಕ

ಬಿಗ್ ಬಾಸ್ ಕನ್ನಡ- 12 : ಯಾರೆಲ್ಲ ಸ್ಪರ್ಧಿಗಳು?.. ಮಾಸ್ಕ್ ಮ್ಯಾನ್ ಯಾರು ಗೊತ್ತಾ?

Views: 107

ಕನ್ನಡ ಕರಾವಳಿ ಸುದ್ದಿ: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇಂದು ಚಾಲನೆ ಸಿಗಲಿದೆ. ಈಗಾಗಲೇ ಕಲರ್ಸ್ ಕನ್ನಡ ತನ್ನ ಚಿಕ್ಕ ಪ್ರೋಮೋ ಮೂಲಕ ಮನೆಯ ಲುಕ್ ರಿವೀಲ್ ಮಾಡಿದ್ದು, ಅರಮನೆಯಂತೆ ಕಂಗೊಳಿಸುತ್ತಿದೆ. ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಪ್ರತಿಬಿಂಬಿಸುವಂತೆ ಮನೆಯ ವಿನ್ಯಾಸವನ್ನು ತೋರಿಸಲಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಹಬ್ಬ ಇವಾಗ ಶುರು ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಹೇಳಿಕೊಂಡಿದ್ದಾರೆ.ಈ ಬಾರಿ ದೊಡ್ಮನೆಗೆ ಯಾರೆಲ್ಲ ಹೋಗುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಹರಿದಾಡುತ್ತಿದೆ.

ಇನ್ನು ಮೀಡಿಯಾ ಕೋಟಾದಿಂದ ದಿವ್ಯಾ ವಸಂತ್ ಬರಲಿದ್ದಾರೆ ಎನ್ನಲಾಗಿದೆ. ಅನನ್ಯಾ ಅಮರ್, ಗಿಲ್ಲಿ ನಟ, ಸತ್ಯ ಹೀರೋ ನಟ ಸಾಗರ್, ಶ್ವೇತಾ ಪ್ರಸಾದ್ ಹೆಸರು ಕೂಡ ಪಟ್ಟಿಯಲ್ಲಿ ಇದೆ. ಇನ್ನು ಪಡ್ಡೆ ಹುಲಿ ಸಿನಿಮಾದ ಮೂಲಕ ಗಮನ ಸೆಳೆದ ನಟ ಶ್ರೇಯಸ್‌ ಮಂಜು ಕೂಡ ಬಿಗ್‌ ಬಾಸ್‌ ಸೀಸನ್‌ 12ಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಉಳಿದಂತೆ ಗೀತಾ ಧಾರಾವಾಹಿ ಮೂಲಕ ಕರ್ನಾಟಕ ಜನತೆಯಲ್ಲಿ ಮನದಲ್ಲಿ ನೆಲೆಸಿರುವ ಧನುಷ್ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗೆ ಅನೇಕ ಹೆಸರುಗಳು ಕೇಳಿಬರುತ್ತಿದ್ದರೂ ಅಧಿಕೃತವಾಗಿ ಯಾರೆಲ್ಲ ಮನೆಯೊಳಗೆ ಹೋಗುತ್ತಾರೆ ಎಂಬುದು ಇನ್ನೇನು ಕೆಲವೇ ಗಂಟೆಗಳಲ್ಲಿ ರಿವೀಲ್ ಆಗಲಿದೆ.

ಬಿಗ್ ಬಾಸ್ ಮನೆಗೆ ಬರುವ ಮಾಸ್ ಮ್ಯಾನ್ ಯಾರು?

ಕಾಕ್ರೋಚ್ ಸುಧಿ ಅವರು ‘ಸಲಗ’, ‘ಭೀಮ’, ‘ಟಗರು’, ‘ಮಾದೇವ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ಬೇಡಿಕೆಯಲ್ಲಿರುವ ಸುಧಿ ಅವರು ಈಗ ಕಿರುತೆರೆ ಮಂದಿಗೆ ಹತ್ತಿರ ಆಗಲು, ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

 

Related Articles

Back to top button
error: Content is protected !!