ಸಾಂಸ್ಕೃತಿಕ

ಕಾಂತಾರ ಚಾಪ್ಟರ್ 1: ರಿಷಬ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ ಕಲಾವಿದರು ಪಡೆದ ಸಂಭಾವನೆ ಎಷ್ಟು?

Views: 142

ಕನ್ನಡ ಕರಾವಳಿ ಸುದ್ದಿ:ಕಾಂತಾರ ಚಾಪ್ಟರ್ 1 ಚಿತ್ರದ ಬಜೆಟ್ 135 ಕೋಟಿ ಎಂದು ಹೇಳಲಾಗುತ್ತಿದ್ದು, ಚಿತ್ರದ ಪ್ರಮುಖ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

ಕಾಂತಾರ ಚಾಪ್ಟರ್ 1ರ ನಿರ್ದೇಶನದ ಜೊತೆ ನಾಯಕ ನಟರಾಗಿಯೂ ರಿಷಬ್ ಶೆಟ್ಟಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಲುಕ್‌ಗೆ ಅಭಿಮಾನಿಗಳು ಐಸ್‌ ನಂತೆ ಕರಗಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೂ ದೇವಕನ್ಯೆಯಾಗಿಯೇ ರುಕ್ಮಿಣಿ ವಸಂತ ಆಗಮಿಸಿದ್ದರು. ನಟಿಯ ಅಂದಕ್ಕೆ ಮನಸೋತ ಅಭಿಮಾನಿಗಳು, ನೀವು ನ್ಯಾಷನಲ್ ಅಲ್ಲ. ಇಂಟರ್‌ನ್ಯಾಷನಲ್ ಕ್ರಶ್ ಎಂದು ನಟಿಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

135 ಕೋಟಿ ರೂಪಾಯಿ ಹೂಡಿಕೆ ಕಾಂತಾರ ಚಾಪ್ಟರ್ 1ರಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರದ ಕಲಾವಿದರ ಸಂಭಾವನೆ ಎಷ್ಟಿರಬಹುದು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಕೆಲವು ವರದಿಗಳ ಪ್ರಕಾರ, ಚಿತ್ರಕ್ಕಾಗಿ ಹೊಂಬಾಳೆ ಫಿಲಂಸ್ 135 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಮೊದಲ ಭಾಗ ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ಸೆಟ್ಟೇರಿತ್ತು. ಚಿತ್ರದ ಬಜೆಟ್‌ ಬಗ್ಗೆ ಸಿನಿತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ರಿಷಬ್ ಶೆಟ್ಟಿ: 100 ಕೋಟಿ ರೂಪಾಯಿ

ಗುಲ್‌ಶನ್‌ ದೇವಯ್ಯ: 1 ಕೋಟಿ ರೂಪಾಯಿ

ಜಯರಾಮ್: 1 ಕೋಟಿ ರೂಪಾಯಿ

ರುಕ್ಮಿಣಿ ವಸಂತ: 1 ಕೋಟಿ ರೂಪಾಯಿ

ನಿರ್ದೇಶನದೊಂದಿಗೆ ನಟನೆಯೂ ಮಾಡಿರುವ ಹಿನ್ನೆಲೆ ರಿಷಬ್ ಶೆಟ್ಟಿ ಸಂಭಾವನೆ ಅಧಿಕವಾಗಿದೆ ಎನ್ನಲಾಗಿದೆ. ರಿಷಬ್ ಮಡದಿ ಪ್ರಗತಿ ಶೆಟ್ಟಿ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.

Related Articles

Back to top button
error: Content is protected !!