ಸಾಂಸ್ಕೃತಿಕ

ಮುಂದಿನ ತಿರುಗಾಟದಲ್ಲಿ ಬಯಲಾಟ ಮೇಳಗಳ ಪ್ರದರ್ಶನಕ್ಕೆ ಕಾಲಮಿತಿ!

Views: 114

ಕನ್ನಡ ಕರಾವಳಿ ಸುದ್ದಿ:ಮುಂದಿನ ತಿರುಗಾಟದಿಂದ ಎಲ್ಲ ಬಯಲಾಟ ಮೇಳಗಳನ್ನು ಕಾಲಮಿತಿ ಪ್ರದರ್ಶನಕ್ಕೆ ಸೀಮಿತಗೊಳಿಸುವುದು.

ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ಅನುಮತಿ ನಿರಾಕರಿಸಿ ಪ್ರದರ್ಶನವನ್ನು ಸ್ಥಗಿತಗೊಳಿಸುವ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿದೆ. ಹೀಗಾಗಿ ಬೆಳಗ್ಗೆ ತನಕ ಪ್ರದರ್ಶನ ನಡೆಸಲು ಸಮಸ್ಯೆಯಾಗುತ್ತಿದ್ದು, ಡೇರೆ ಮೇಳ ಹೊರತುಪಡಿಸಿ ಎಲ್ಲ ಬಯಲಾಟ ಮೇಳಗಳು ಕಾಲಮಿತಿ ನಿಗಡಿಪಡಿಸಿಕೊಂಡು ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಜಿಲ್ಲಾಡಳಿತ, ಸರಕಾರಕ್ಕೆ ಮನವಿ ನೀಡಲಾಗುವುದು ಎಂದು ಬಹುಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ ಹೇಳಿದರು.

ಕೋಟ ಅಮೃತೇಶ್ವರಿ ದೇವಸ್ಥಾನದ ಸಭಾಭವನ ದಲ್ಲಿ ಭಾನುವಾರ ನಡೆದ ಧ್ವನಿ ವರ್ಧಕ ಬಳಕೆ ಕಾರಣಕ್ಕೆ ಯಕ್ಷಗಾನ ಮೇಳಗಳ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿರುವ ಪ್ರಸಂಗಗಳಿಂದ ಎದುರಾಗು ತ್ತಿರುವ ಸಮಸ್ಯೆ ಕುರಿತು ಬಡಗುತಿಟ್ಟಿನ  ಯಜಮಾನರು, ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

ಮೇಳದ ಯಜಮಾನರಾದ ಮಂದಾರ್ತಿ ಧನಂಜಯ ಶೆಟ್ಟಿ ಕೋಟ ಅಮೃತೇಶ್ವರಿಯ ಆನಂದ ಸಿ.ಕುಂದರ್‌, ಮಾರಣಕಟ್ಟೆಯ ಸದಾಶಿವ ಶೆಟ್ಟಿ, ರಘುರಾಮ್ ಶೆಟ್ಟಿ ಮಡಾಮಕ್ಕಿಯ ಶಶಿಧರ ಶೆಟ್ಟಿ,

ಸಭೆಯಲ್ಲಿ ಕೈಗೊಂಡ ನಿರ್ಣಯ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು ಮುಂದಿನ ತಿರುಗಾಟದಿಂದ ಎಲ್ಲ ಬಯಲಾಟ ಮೇಳಗಳನ್ನು ಕಾಲಮಿತಿ ಪ್ರದರ್ಶನಕ್ಕೆ ಸೀಮಿತಗೊಳಿಸುವುದು. ರಾತ್ರಿ 7.30ರಿಂದ 1 ಗಂಟೆ ಅಥವಾ ಅನಿವಾರ್ಯ ಸಂದರ್ಭದಲ್ಲಿ 1.30ರ ತನಕ ಮಾತ್ರ ಪ್ರದರ್ಶನಗಳನ್ನು ನಡೆಸುವುದು. ಈ ಸಮಯದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಡಿಸಿ, ಎಸ್‌ಪಿ, ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂಗೆ ಮನವಿ ಸಲ್ಲಿಸುವುದು. ಸೇವಾದಾರರು ಹಾಗೂ ಕ್ಯಾಂಪ್ ಸಂಯೋಜಕರಲ್ಲಿ ಈ ಬಗ್ಗೆ ಸಹಕಾರ ಕೋರುವುದು. ಈಗ ಕೆಲವು ಮೇಳಗಳಲ್ಲಿ ಕೂಡಾಟಕ್ಕೆ ಅವಕಾಶವಿರುವುದಿಲ್ಲ. ಮುಂದೆ ಮೇಳ-ಮೇಳಗಳ ನಡುವೆ ದಿನಾಂಕ, ಇನ್ನಿತರ ಹೊಂದಾಣಿಕೆಗಳಾದರೆ ಕೂಡಾಟಕ್ಕೆ ಅವಕಾಶ ನೀಡುವುದು ಎನ್ನುವ ತೀರ್ಮಾನಕ್ಕೆ ಬರಲಾಯಿತು.

ಹಾಲಾಡಿ ಮೇಳದ ಅಮರನಾಥ ಶೆಟ್ಟಿ, ಗೋಳಿಗರಡಿ ವಿಠಲ ಪೂಜಾರಿ, ಆಜ್ರಿ ಮೇಳದ ಅಶೋಕ್ ಶೆಟ್ಟಿ ಅನಿಸಿಕೆ ಹಂಚಿಕೊಂಡರು. ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.

ಚಂದ್ರಶೇಖರ ಆಚಾರ್ಯ, ಸುಭಾಷ್ ಶೆಟ್ಟಿ ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು ಮಂದಾರ್ತಿ ದೇವಸ್ಥಾನದ ಅಶೋಕ್ ಕುಂದರ್, ರವಿ ಶೆಟ್ಟಿ ವಿಜಯ್, ಗೋಳಿಗರಡಿಯ ಗಣಪಯ್ಯ ಆಚಾ‌ರ್, ಎಳ್ಳಂಪಳ್ಳಿ ಜಗನ್ನಾಥ್ ಆಚಾರ್ಯ ಉಪಸ್ಥಿತರಿದ್ದರು.

Related Articles

Back to top button