ಸಾಂಸ್ಕೃತಿಕ

ದರ್ಶನ್ ಜೈಲಿನಲ್ಲಿರುವಾಗ ಇತ್ತ ಮನೆಯಲ್ಲಿ ಕಳ್ಳತನ

Views: 118

ಕನ್ನಡ ಕರಾವಳಿ ಸುದ್ದಿ: ದರ್ಶನ್ ಜೈನಲ್ಲಿರುವಾಗಲೇ ಮನೆಯಲ್ಲಿ ಕಳ್ಳತನ ನಡೆದಿದ್ದು ಕಳ್ಳ ಮೂರು ಲಕ್ಷ ಕದ್ದು ಪರಾರಿಯಾಗಿದ್ದಾನೆ.ಇನ್ನು ಕಳ್ಳತನ ನಡೆದ ವಿಚಾರ ಅರಿವಿಗೆ ಬರುತ್ತಿದ್ದಂತೆಯೇ ವಿಜಯಲಕ್ಷ್ಮಿ ಸದ್ಯ ತಮ್ಮ ಮ್ಯಾನೇಜರ್ ನಾಗರಾಜ್ ಅವರ ಮೂಲಕ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲಿಸಿದ್ದಾರೆ.

ಅದರನ್ವಯ ಸೆಪ್ಟೆಂಬರ್ 4ರಂದು ಕೆಲಸದ ನಿಮಿತ್ ವಿಜಯಲಕ್ಷ್ಮೀ ದರ್ಶನ್ ಮೈಸೂರಿಗೆ ತೆರಳಿದ್ದರು. ಮೈಸೂರಿಗೆ ತೆರಳುವ ಮುನ್ನ ಮನೆಯ ವಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿ ಹಣ ತೆಗೆದುಕೊಡಲು ಮ್ಯಾನೇಜರ್‌ಗೆ ಹೇಳಿದ್ದರು. ಅದರಲ್ಲಿನ ಸ್ವಲ್ಪ ಹಣ ತೆಗೆದು ಉಳಿದ ಹಣವನ್ನು ವಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿಯೇ ಇರಿಸಿದ್ದ ಮ್ಯಾನೇಜರ್ ನಾಗರಾಜ್ ಆ ನಂತರ ಮನೆ ಬೀಗವನ್ನು ಮರಳಿಸಿದ್ದರು. ಬಳಿಕ ವಿಜಯಲಕ್ಷ್ಮೀ ಹಾಗೂ ನಾಗರಾಜ್ ಹೊರಗಡೆ ಹೋಗಿದ್ದರು.

ಸೆಪ್ಟೆಂಬರ್ 7 ರಂದು ಬೆಂಗಳೂರಿಗೆ ಮರಳಿ ಬಂದ ವಿಜಯಲಕ್ಷ್ಮಿ, ಸೆಪ್ಟೆಂಬರ್ 8ರಂದು ತಮ್ಮ ವಾಡ್ರೂಬ್‌ನಲ್ಲಿನ ಕಾಟನ್ ಬಾಕ್ಸ್‌ನ ತೆರೆದು ನೋಡಿದ್ದಾರೆ. ಆಗ ಹಣ ಸಿಗದಿದ್ದಾಗ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಮನೆಯಲ್ಲಿ ಹುಡುಕಾಟ ನಡೆಸಿದ್ದು, ಹಣ ಸಿಗದಿದ್ದಾಗ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ವಿಜಯಲಕ್ಷ್ಮೀ ದರ್ಶನ್ ಅವರು ತಮ್ಮ ಮನೆ ಕೆಲಸದವರ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದ್ದು, ಮನೆ ಕೆಲಸದವರ ವಿರುದ್ದ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮೂರು ಲಕ್ಷ ಹಣ ಕಳ್ಳತನವಾಗಿದೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ತನಿಖೆಯನ್ನು ಮಾಡುತ್ತಿದ್ದಾರೆ.

Related Articles

Back to top button
error: Content is protected !!