ರಾಜಕೀಯ

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕರ ಯಾತ್ರೆ ವೇಳೆ ಕಾರು ಅಪಘಾತ:ಅಮಾಯಕ ಬಲಿ

Views: 307

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕರ ಯಾತ್ರೆ ವೇಳೆ ಕಾರು ಅಪಘಾತ ಸಂಭವಿಸಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಕುಣಿಗಲ್ ಬಳಿಯ ಬೆಳ್ಳೂರು ಕ್ರಾಸ್ ಬಳಿ ಈ ಅಪಘಾತ ನಡೆದಿದ್ದು,ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಕಾರಿನಲ್ಲಿ ಶಾಸಕ ರಾಮಮೂರ್ತಿ ಸಹೋದರ ಮುರಳಿ ಇದ್ದರು ಎಂದು ಹೇಳಲಾಗುತ್ತಿದೆ.

ಇನ್ನು, ಈ ಘಟನೆ ಸಂಬಂಧ ಸಿ.ಕೆ ರಾಮಮೂರ್ತಿ ದೂರವಾಣಿ ಕರೆಯಲ್ಲಿ ಮಾತಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಗೆ ಅಪಘಾತವಾಗಿದೆ. ಆ ವ್ಯಕ್ತಿ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದಿದ್ದೇನೆ. ಕಾನೂನು ಪ್ರಕಾರ ಏನಿದೆ ಅದೇ ರೀತಿಯಲ್ಲಿ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಈಗಾಗಲೇ ನಮ್ಮ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೇಣುಗೋಪಾಲ ಅಂತ ವ್ಯಕ್ತಿಯ ಕಾರು ಆ್ಯಕ್ಸಿಡೆಂಟ್ ಮಾಡಿದ್ದಾನೆ. ನಮ್ಮ ಕಾರುಗಳು ಹೋಗುವ ವೇಳೆಯಲ್ಲಿ ಬೈಕ್ನಲ್ಲಿ ಅಡ್ಡ ಬಂದಿದ್ದಾನೆ. ಸುಮಾರು 75 ವರ್ಷದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

Related Articles

Back to top button