ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ
"ಇಡೀ ದೇಶ ಹೆಚ್ಚು ಸಂಭ್ರಮಿಸುವ ಈ ದಿನವು ಮುಂದಿನ ಸುಭದ್ರ ಭಾರತವನ್ನು ಕಟ್ಟಲು ಸರ್ವರಿಗೂ ಪ್ರೇರಣೆಯಾಗಬೇಕು, ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸುವುದರೊಂದಿಗೆ ಇಂದಿನ ಯುವಜನತೆ ದೇಶದ ಸರ್ವಾಂಗೀಣ ಪ್ರಗತಿಗೆ ಪಣತೊಡಬೇಕು"----ಶ್ರೀ ಸುಭಾಶ್ಚಂದ್ರ ಶೆಟ್ಟಿ, ಬಾಂಡ್ಯಾ ಎಜುಕೇಶನ್ ಟ್ರಸ್ಟ್

Views: 291
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಸಮೂಹ ವಿದ್ಯಾಸಂಸ್ಥೆಗಳಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು,
ಬಾಂಡ್ಯಾ ಎಜುಕೇಶನ್ ಟ್ರಸ್ಟ್ ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಸುಭಾಶ್ಚಂದ್ರ ಶೆಟ್ಟಿ 79 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣಗೈದು ಮಾತನಾಡುತ್ತಾ, ಇಡೀ ದೇಶ ಹೆಚ್ಚು ಸಂಭ್ರಮಿಸುವ ಈ ದಿನವು ಮುಂದಿನ ಸುಭದ್ರ ಭಾರತವನ್ನು ಕಟ್ಟಲು ಸರ್ವರಿಗೂ ಪ್ರೇರಣೆಯಾಗಬೇಕು, ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸುವುದರೊಂದಿಗೆ ಇಂದಿನ ಯುವಜನತೆ ದೇಶದ ಸರ್ವಾಂಗೀಣ ಪ್ರಗತಿಗೆ ಪಣತೊಡಬೇಕು ಎಂದರು.
ಪ್ರಾಂಶುಪಾಲರಾದ ಡಾ. ರೂಪ ಶೆಣೈ ಯವರು ಮಾತಾಡಿ ದೇಶದ ಅಭಿವೃದ್ಧಿಯೊಂದಿಗೆ ಸಾಮರಸ್ಯದ ಬದುಕಿಗಾಗಿ ದಿಟ್ಟ ಹೆಜ್ಜೆಯನಿಡಬೇಕೆಂದು ತಿಳಿಸಿದರು.ಎಸ್.ಸಿ.ಸಿ. ವಿದ್ಯಾರ್ಥಿಗಳು ಸುಂದರ ಪಥ ಸಂಚಲನ ನಡೆಸಿದರು. ಧ್ವಜಾರೋಹಣದ ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರೋತ್ಸವದ ಶುಭ ಸಂದೇಶ ನೀಡಿದರು. ಶಿಕ್ಷಕಿ ಸಂಧ್ಯಾ ಕುಮಾರಿ ಕಾರ್ಯ ಕ್ರಮ ನಿರೂಪಿಸಿ ಸರ್ವರನ್ನು ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸಿಂಧು ರವರು ವಂದಿಸಿದರು.