ಮಾಹಿತಿ ತಂತ್ರಜ್ಞಾನ

ಧರ್ಮಸ್ಥಳಕ್ಕೆ ಬಂತು ಹೂತಿರುವ ಶವಗಳ ಸುಳಿವು ಪಡೆಯಲು GPR ಕಾರ್ಯಾಚರಣೆ

Views: 132

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ತನಿಖೆ ಚುರುಕುಗೊಳಿಸಿದ್ದು, ನೇತ್ರಾವತಿ ನದಿಯ ದಡದಲ್ಲಿರುವ ‘ಪಾಯಿಂಟ್ ನಂ.13’ ರಲ್ಲಿ ಭೂಮಿಯ ಆಳದಲ್ಲಿ ಹೂತಿರುವ ಶವಗಳ ಬಗ್ಗೆ ಸುಳಿವು ಪಡೆಯಲು  GPR ತಂತ್ರಜ್ಞಾನವನ್ನು ಬಳಸಿ ಸ್ಕ್ಯಾನ್‌ ನಡೆಸಲು ಸಿದ್ಧತೆ ನಡೆಸಿದ್ದು, ಕಾರ್ಯಾಚರಣೆ ಆರಂಭಿಸಿದೆ

ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರ ನೇತೃತ್ವದಲ್ಲಿ ಜಿಪಿಆರ್ ತಂತ್ರಜ್ಞರ ತಂಡ, ಫೊರೆನ್ಸಿಕ್ ವೈದ್ಯರು ಹಾಗೂ ಕಾರ್ಮಿಕರು ಪಾಯಿಂಟ್ ನಂ. 13ಕ್ಕೆ ಆಗಮಿಸಿದ್ದು, ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಸಾಮಾನ್ಯ GPR ಆಂಟೆನಾವನ್ನು ಡೋಣ್ ನ ಕೆಳಭಾಗದಲ್ಲಿ ಅಳವಡಿಸಿ, ಡೋನ್ ಗಾಳಿಯಲ್ಲಿ ಹಾರುತ್ತಾ ನೆಲದ ಮೇಲ್ಕೆಗೆ ಸಮೀಪವಾಗಿ GPR ಸಿಗ್ನಲ್‌ಗಳನ್ನು ಕಳುಹಿಸುತ್ತದೆ. ಈ ಸಿಗ್ನಲ್‌ಗಳು ನೆಲದೊಳಗೆ ಹೋಗಿ ಪ್ರತಿಫಲಿಸಿ ಮರಳಿ ಬರುತ್ತವೆ. ನಂತರ ಈ ಸಿಗ್ನಲ್‌ಗಳನ್ನು ಸೆನ್ಸರ್‌ಗಳು ದಾಖಲಿಸಿಕೊಂಡು, ಸಾಫ್ಟ್‌ವೇ‌ರ್ ಮೂಲಕ 2D ಅಥವಾ 3D ಚಿತ್ರವಾಗಿ ಪರಿವರ್ತಿಸಿ ನಿಖರವಾದ ಫಲಿತಾಂಶವನ್ನು ನೀಡುತ್ತದೆ. ಈ ತಂತ್ರಜ್ಞಾನವು ವೇಗವಾಗಿ ಮತ್ತು ದೊಡ್ಡ ಪ್ರದೇಶವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.

Related Articles

Back to top button
error: Content is protected !!