ರಾಜಕೀಯ

ಕೋಟೇಶ್ವರದಲ್ಲಿ ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ

Views: 235

ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ಅಗಸ್ಟ್ 4ರಂದು ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ ವಹಿಸಿದ್ದರು.

ಕುಂದಾಪುರ ಭಂಡಾರ್ಕಾಕರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಾಕರಾಚಾರಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕಾದರೆ ಸಂವಿಧಾನದ ಒತ್ತಾಸೆಯಲ್ಲಿ   ಜೀವನ ಮಾಡಬೇಕು. ಬಂದಂತಹ ಸವಾಲುಗಳನ್ನು ಮಾತುಕತೆಗಳ ಮೂಲಕ ಉಪನ್ಯಾಸಕರು ಸೇರಿ ಬಗೆಹರಿಸಿ ಭವ್ಯ ಭಾರತವನ್ನು ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸೇರಿ ಚಿಂತನ-ಮಂಥನ ಮಾಡಿ ಆ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಪ್ರಜಾಪ್ರಭುತ್ವದಲ್ಲಿ  ಜವಾಬ್ದಾರಿಯುತವಾದ ವ್ಯಕ್ತಿಯಾಗಿ ರೂಪಿಸುವ ಹೊಣೆ ಪ್ರತಿಯೊಬ್ಬ ಉಪನ್ಯಾಸಕರ ಮೇಲಿದೆ ಎಂದರು.

ವೇದಿಕೆಯಲ್ಲಿ ಶ್ರೀ ಚಂದ್ರನಾಥ್ ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜು ಚೇಳಾರು, ಮಂಗಳೂರು ಇವರು ದ್ವಿತೀಯ ಪಿಯುಸಿ ವಿಷಯ ವಸ್ತುವನ್ನು, ಇಂದಿನ ಶೈಕ್ಷಣಿಕ ಸನ್ನಿವೇಶಗಳನ್ನು ಪಿಪಿಟಿಯ ಮೂಲಕ ಪ್ರಸ್ತುತಪಡಿಸಿದರು.

ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಅವರು, ಪ್ರಶ್ನೆ ಪತ್ರಿಕೆಯ ರೂಪರೇಶಿಗಳ ಬಗ್ಗೆ ಚರ್ಚಿಸಿದರು. ಗೌರವ ಅಧ್ಯಕ್ಷರಾದ ಶ್ರೀ ವಾಸು ಮೊಗವೀರ, ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಸಂಘದ ಹಿಂದಿನ ಅಧ್ಯಕ್ಷರಾದ ದಯಾನಂದ್ ಉಪಸ್ಥಿತಿಯಲ್ಲಿ ಬೈಂದೂರು ಕಾಲೇಜಿನ ಪ್ರಭಾರ ಪ್ರಾಚಾರ್ಯ ಶ್ರೀ ವೆಂಕಟರಮಣ ನಾಯಕ್ ಪ್ರಾರ್ಥಿಸಿದರು.ರಾಜ್ಯಶಾಸ್ತ್ರ ಉಪನ್ಯಾಸಕ ಹರೀಶ್ ನಾಯಕ್ ಸ್ವಾಗತಿಸಿದರು.ಗೋಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಕಾಶ್   ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ  ಶ್ರೀ ರಾಘವೇಂದ್ರ ಕಿಣಿ ಅತಿಥಿಗಳನ್ನು ಪರಿಚಯಿಸಿದರು‌, ಕೊಲ್ಲೂರು ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಂಗೀತ ಶೆಟ್ಟಿ ವಂದಿಸಿದರು.

ವಿಶೇಷವಾಗಿ ಎಲ್ಲಾ ಉಪನ್ಯಾಸಕರಿಗೆ ಹಾಗೂ ರಾಜ್ಯಶಾಸ್ತ್ರದ ಎಲ್ಲಾ ವಿದ್ಯಾರ್ಥಿಗಳಿಗೆ.. ಸಂವಿಧಾನ ಓದು ಪುಸ್ತಕವನ್ನು ನೀಡಲು ಶ್ರೀಮತಿ ಸಂಧ್ಯಾ ನಾಯಕ್ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಹಕಾರಕ್ಕೆ ಅಭಿನಂದಿಸಲಾಯಿತು. ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಉಪನ್ಯಾಸಕರು ಸಹಕಾರ ನೀಡಿದರು.

 

Related Articles

Back to top button
error: Content is protected !!