ಯುವಜನ
ವಿವಾಹಿತ ವ್ಯಕ್ತಿಯಿಂದ ಪ್ರೀತಿಸುವಂತೆ ಪೀಡನೆ: ಬೇಸತ್ತ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Views: 117
ಕನ್ನಡ ಕರಾವಳಿ ಸುದ್ದಿ: ವಿವಾಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ನವೀನ್ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ.
ಮೃತ ವಿದ್ಯಾರ್ಥಿನಿ ಭಾವನಾ, ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಮೈಸೂರಿನಲ್ಲಿದ್ದ ಭಾವನಾಳ ಖರ್ಚಿಗೆ ಅವಳ ಅಪ್ಪ ಪೋನ್ ಪೇ ಮೂಲಕ ಹಣ ಕಳಿಸಬೇಕಿತ್ತು. ತಮಗೆ ಫೋನ್ ಪೇ ವ್ಯವಹಾರ ಮಾಡಲು ಬಾರದ ಹಿನ್ನೆಲೆಯಲ್ಲಿ ಅದೇ ಗ್ರಾಮದ ನವೀನ್ ಎಂಬಾತನಿಗೆ ಹೇಳಿ ಮಗಳ ಮೊಬೈಲ್ ನಂಬರ್ ಕೊಟ್ಟು ಆಕೆಗೆ, ಹಣ ಕಳಿಸಲು ಹೇಳುತ್ತಿದ್ದರು.
ಆದರೆ, ಈತ ಯುವತಿಯ ಮೊಬೈಲ್ ನಂಬರ್ ದುರ್ಬಳಕೆ ಮಾಡಿಕೊಂಡು, ತನ್ನನ್ನು ಪ್ರೀತಿ ಮಾಡುವಂತೆ ಭಾವನಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಮದುವೆ ಆಗಿ ಮಕ್ಕಳಿದ್ದ ವ್ಯಕ್ತಿ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದರಿಂದ ಭಾವನಾ ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.






