ಸಾಂಸ್ಕೃತಿಕ

ನಿರೂಪಕಿ ಅನುಶ್ರೀ ಮನಸ್ಸು ಕದ್ದು ಮದುವೆಯಾಗುವ ಹುಡ್ಗ ಇವರೇ ನೋಡಿ!

Views: 362

ಕನ್ನಡ ಕರಾವಳಿ ಸುದ್ದಿ: ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ರೋಷನ್ ಜೊತೆ ಆ್ಯಂಕರ್ ಅನುಶ್ರೀ ಅವರು ಆಗಸ್ಟ್ 27, 28ರಂದು ಬೆಂಗಳೂರು ಮೂಲದ ಐಟಿ ಉದ್ಯೋಗಿ ಜೊತೆ ವಿವಾಹ ಜರುಗಲಿದೆ. ಅನುಶ್ರೀ ಪಕ್ಕಾ ಅರೇಂಜ್ ಮ್ಯಾರೇಜ್ ಆಗಲಿದ್ದಾರೆ. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನಲ್ಲೇ ಅದ್ಧೂರಿ ವಿವಾಹ ಜರುಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಅನುಶ್ರೀ ಹಾಗೂ ರೋಷನ್ ಜೊತೆಗೆ ಪೂಜೆಯಲ್ಲಿ ಭಾಗಿಯಾಗಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

37 ವರ್ಷದ ಅನುಶ್ರೀ ರೋಷನ್‌ ಅವರ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಅನುಶ್ರೀ ಮದುವೆ ಆಗುತ್ತಿರುವ ಉದ್ಯಮಿ ರೋಷನ್ 300 ಕೋಟಿ ಒಡೆಯ ಹಾಗೂ ಭಾರೀ ಶ್ರೀಮಂತ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ತಮ್ಮ ಆಸೆಯಂತೆ ಅನುಶ್ರೀ ಅಪ್ಪು ಅಭಿಮಾನಿ ಜೊತೆ ವಿವಾಹವಾಗಲಿದ್ದಾರೆ. ಗಂಧದ ಗುಡಿ ಸಿನಿಮಾ ಇವೆಂಟ್ ನಲ್ಲಿ ಅನುಶ್ರೀ ಹಾಗೂ ರೋಷನ್‌ ಭೇಟಿಯಾಗದ್ದರಂತೆ. ಈ ಇವೆಂಟ್‌ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರು ಆಯೋಜನೆ ಮಾಡಿದ್ದರು.

ಅದೇ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಣೆಯನ್ನು ಮಾಡಿದ್ದರು. ರೋಷನ್ ಕೂಡ ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಇದೀಗ ಮದುವೆಯವರೆಗೆ ಬಂದು ನಿಂತಿದೆ.

Related Articles

Back to top button