ಸಾಮಾಜಿಕ
ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷರಾಗಿ ವಿಜಯಕುಮಾರ್ ಶೆಟ್ಟಿ ಆಯ್ಕೆ

Views: 143
ಕನ್ನಡ ಕರಾವಳಿ ಸುದ್ದಿ: ಪ್ರತಿಷ್ಠಿತ ರೋಟರಿ ಕ್ಲಬ್ ಕೋಟೇಶ್ವರ 2025 -26 ರ ಸಾಲಿನ ನೂತನ ಅಧ್ಯಕ್ಷರಾಗಿ ರೋ.ವಿಜಯ್ ಕುಮಾರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
ವಿಜಯ್ ಕುಮಾರ್ ಶೆಟ್ಟಿ ಅವರು ಶಾಲಾ ಕಾಲೇಜಿನಲ್ಲಿ ಓದುತ್ತಿರುವಾಗಲೇ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಪ್ರಶಂಸೆ ಪಡೆದ ಇವರು ಅರ್ಹವಾಗಿಯೇ ಈ ಹುದ್ದೆಯನ್ನು ಅಲಂಕರಿಸಿದ್ದಾರೆ
ಕಾರ್ಯದರ್ಶಿಯಾಗಿ ರೋ ಸುಧೀರ್ ಕುಮಾರ್ ಶೆಟ್ಟಿ ನೂ ಜಿ. ವಲಯ ಸೇನಾನಿಯಾಗಿ ರೋ. ರವೀಂದ್ರ ಶೆಟ್ಟಿ ,ಜೊತೆ ಕಾರ್ಯದರ್ಶಿಯಾಗಿ ರೋ. ಚಂದ್ರಹಾಸ್ ಗಾಣಿಗ. ಖಜಾಂಚಿಯಾಗಿ ರೋ ನಾಗೇಶ್ ಶೆಟ್ಟಿಗಾರ್ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.