ಯುವಜನ

ಯಾವ ಸಂಬಂಧಿಕರಿಲ್ಲ, ಇಂಗ್ಲೀಷ್ ಬರಲ್ಲ 24 ವರ್ಷದ ಭಾರತೀಯ ಯುವತಿ ಅಮೆರಿಕದಲ್ಲಿ ನಿಗೂಢ ನಾಪತ್ತೆ 

Views: 200

ಕನ್ನಡ ಕರಾವಳಿ ಸುದ್ದಿ: ಮದುವೆಗೆಂದು ಭಾರತದಿಂದ ಅಮೆರಿಕಕ್ಕೆ ಬಂದಿದ್ದ 24 ವರ್ಷದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ.

ಸಿಮ್ರಾನ್ ಎಂಬ ಯುವತಿ ಜೂನ್ 20ರಂದು ನ್ಯೂಜೆರ್ಸಿಯಲ್ಲಿ ವಿಮಾನದಿಂದ ಇಳಿದ ನಂತರ ಕಾಣೆಯಾಗಿದ್ದಾಳೆ.ಈಕೆ ನ್ಯೂಜೆರ್ಸಿಯಲ್ಲಿ ವಿಮಾನ ಇಳಿದ ಐದು ದಿನಗಳ ನಂತರ, ಬುಧವಾರ ಪೊಲೀಸರಿಗೆ ದೂರು ಬಂದಿದೆ. ಲಿಂಡೆನ್‌ವಾಲ್ಡ್‌ ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಗಳಲ್ಲಿ, ಯುವತಿ ಫೋನ್‌ನಲ್ಲಿ ಯಾರ ಜೊತೆಯೋ ಮಾತಾನಾಡುವುದು ರೆಕಾರ್ಡ್ ಆಗಿದೆ. ಯುವತಿ ಭಯಭೀತಳಾಗಿರಲಿಲ್ಲ, ಯಾರನ್ನೋ ಕಾಯುತ್ತಿದ್ದಂತೆ ಕಾಣಿಸಿತ್ತು.

ಪ್ರಾಥಮಿಕ ತನಿಖೆಯಲ್ಲಿ, ಯುವತಿ ಅಮೆರಿಕಕ್ಕೆ ಬಂದಿದ್ದು ‘ಅರೇಂಜ್ ಮ್ಯಾರೇಜ್’ ಗಾಗಿ ಅಂತ ಗೊತ್ತಾಗಿದೆ. ಆದ್ರೆ, ಅಮೆರಿಕಕ್ಕೆ ಫ್ರೀಯಾಗಿ ಹೋಗೋಕೆ ಮದುವೆ ನೆಪ ಮಾಡಿದ್ದಾಳಾ ಅಂತಾನೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ ಪೊಲೀಸರು ಈ ಸಾಧ್ಯತೆಯನ್ನೂ ಪರಿಗಣಿಸ್ತಿದ್ದಾರೆ.

ಸಿಮ್ರಾನ್‌ಗೆ ಅಮೆರಿಕದಲ್ಲಿ ಯಾವ ಸಂಬಂಧಿಕರಿಲ್ಲ, ಆಕೆಗೆ ಇಂಗ್ಲಿಷ್ ಕೂಡ ಬರಲ್ಲ ಅಂತ ನ್ಯೂಜೆರ್ಸಿ ಪೊಲೀಸರು ಹೇಳಿದ್ದಾರೆ. ಸಿಮ್ರಾನ್‌ಳ ಇಂಡಿಯಾದ ಕುಟುಂಬದವರನ್ನು ಸಂಪರ್ಕಿಸೋಕೆ ಪೊಲೀಸರಿಗೆ ಆಗಿಲ್ಲ. ಸಿಮ್ರಾನ್ ಎಲ್ಲಿದ್ದಾಳೆ ಅನ್ನೋ ಮಾಹಿತಿಗಾಗಿ ಇಂಡಿಯಾದಲ್ಲಿರೋ ಕುಟುಂಬದವರನ್ನು ಸಂಪರ್ಕಿಸೋ ಪ್ರಯತ್ನ ಮಾಡ್ತಿದ್ದೀವಿ ಅಂತ ಲಿಂಡೆನ್‌ವಾಲ್ಡ್ ಪೊಲೀಸರು ಹೇಳಿದ್ದಾರೆ.

ಈಕೆ ಕೊನೆಯದಾಗಿ ಕಾಣಿಸಿಕೊಂಡಾಗ ಗ್ರೇ ಬಣ್ಣದ ಸೈಟ್‌ಪ್ಯಾಂಟ್, ಬಿಳಿ ಟೀ-ಶರ್ಟ್, ಕಪ್ಪು ಫಿಪ್-ಫ್ಲಾಪ್ಸ್ ಮತ್ತು ವಜ್ರದ ಓಲೆಗಳನ್ನ ಧರಿಸಿದ್ದಳು. ಐದು ಅಡಿ ನಾಲ್ಕು ಇಂಚು ಎತ್ತರ, ಸುಮಾರು 68 ಕೆಜಿ ತೂಕ, ಹಣೆಯ ಎಡಭಾಗದಲ್ಲಿ ಸಣ್ಣ ಮಚ್ಚೆ ಇದೆ. ಸಿಮ್ರಾನ್ ಬಗ್ಗೆ ಏನಾದ್ರೂ ಮಾಹಿತಿ ಸಿಕ್ಕಿದ್ರೆ ಲಿಂಡೆನ್‌ವಾಲ್ಡ್‌ ಪೊಲೀಸರಿಗೆ ತಿಳಿಸಿ ಅಂತ ಅಧಿಕಾರಿಗಳು ಮನವಿ ಮಾಡಿದ್ದಾರೆ.

Related Articles

Back to top button
error: Content is protected !!