ಇತರೆ

ಶಿಕ್ಷಕಿ ತಾಯಿ, ಪ್ರಿನ್ಸಿಪಾಲ್ ಜೊತೆ ಸಂಬಂಧ ವಿರೋಧಿಸಿದ್ದಕ್ಕೆ 12 ವರ್ಷದ ಮಗನನ್ನೇ ಮುಗಿಸಿದ ಹೆತ್ತ ತಾಯಿ 

Views: 309

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಕಿಯಾಗಿದ್ದ ತಾಯಿ, ಶಾಲಾ ಪ್ರಾಂಶುಪಾಲ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು 12 ವರ್ಷದ ಮಗ ವಿರೋಧಿಸಿದ್ದಕ್ಕೆ ತಾಯಿ ಪ್ರಾಂಶುಪಾಲ ಜೊತೆ ಸೇರಿ ವಯಸ್ಸಿಗೆ ಬಂದ ಮಗನನ್ನೇ ಮುಗಿಸಿದ ಘಟನೆ ಕೃತ್ಯ ಬೆಳಕಿಗೆ ಬಂದಿದೆ.

ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೋಮಾಕುಮಾರಿ (32) ಶಾಲಾ ಶಿಕ್ಷಕಿ, ತನ್ನ 12 ವರ್ಷದ ಮಗ ಶ್ರೇಯಾಂಸ್ ನನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ್ದಾಳೆ. 12 ವರ್ಷದ ಮಗ ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದಾಗ, ತಾಯಿಯೇ ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ಜೊತೆ ಸೇರಿ ಮಗನನ್ನು ಹತ್ಯೆ ಮಾಡಿದ್ದಾಳೆ.

ಬಳಿಕ ಮೃತದೇಹವನ್ನು ಕೋನಹಾರ್ ಬ್ರಿಡ್ಜ್ ಬಳಿ ಹಾಕಿ ಬೆಂಕಿ ಹಚ್ಚಿದ್ದಾರೆ. ಜೂನ್ 15 ರಂದು ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮಗನ ಕೊಲೆ ಕೇಸ್ ನಲ್ಲಿ ತಾಯಿ ರೋಮಾ ಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬಿಹಾರದ ಅರಾ ಜಿಲ್ಲೆಯ ರೋಮಾ ಕುಮಾರಿ, ನಿರ್ಮಲ್ ಪಾಸ್ವಾನ್ರನ್ನು ಶಾಲಾ ತರಬೇತಿ ವೇಳೆ ಭೇಟಿಯಾಗಿದ್ದಳು. ರೋಹಟಸ್ ನ ಪ್ರೈಮರಿ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ನಿರ್ಮಲ್ ಪಾಸ್ವಾನ್ ಪ್ರಿನ್ಸಿಪಾಲ್ ಆಗಿದ್ದ. ಗಂಡನ ಜೊತೆಗಿನ ವೈವಾಹಿಕ ಸಂಬಂಧ ಹಾಳಾಗಿದ್ದರಿಂದ ರೋಮಾಕುಮಾರಿ, ಪ್ರಿನ್ಸಿಪಾಲ್ ಕಡೆ ಆಕರ್ಷಿತಳಾಗಿ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ರೋಮಾಕುಮಾರಿ ಮನೆಗೆ ಪದೇ ಪದೇ ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ಬರುವುದಕ್ಕೆ ಮಗ ಶ್ರೇಯಾಂಸ್ ವಿರೋಧಿಸಿದ್ದ. ಇದೇ ಜೀವ ತೆಗೆಯಲು ಕಾರಣ ಎಂದು ಹೇಳಲಾಗಿದೆ.

Related Articles

Back to top button
error: Content is protected !!