ಇತರೆ

ಪ್ರಿಯಕರನ ಜೊತೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿದ ಪತಿ!

Views: 121

ಕನ್ನಡ ಕರಾವಳಿ ಸುದ್ದಿ:  ನವವಿವಾಹಿತೆಯೊಬ್ಬಳು ಗಂಡನ ಮನೆಯಿಂದ ತವರು ಮನೆಗೆ ಬಂದು ತನ್ನ ಪ್ರಿಯಕರನ ಜತೆ ಓಡಿಹೋದ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಅದೇ ಸಿಟ್ಟಿನಲ್ಲಿ ಆಕೆಯ ಮೂಗನ್ನು ಕಚ್ಚಿದ್ದಾನೆ. ಇದರ ಪರಿಣಾಮ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವ ಹೆಚ್ಚಾಗಿದ್ದರಿಂದ ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ನಡುವೆ ಪೊಲೀಸರು ಆರೋಪಿ ಪತಿ ರಾಮ್ ಖಿಲಾವನ್‌ನನ್ನು ಬಂಧಿಸಿದ್ದಾರೆ. ಈ ಸುದ್ದಿ ಈಗ ವೈರಲ್‌ ಆಗಿದೆ.

ಈ ಘಟನೆ ಹಾರ್ದೋಯ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು, ಮಹಿಳೆ ಅದೇ ಗ್ರಾಮದ ನಿವಾಸಿಯಾಗಿರುವ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೋದಾಗ ಖಿಲಾವನ್ ಪತ್ನಿಯನ್ನು ಹಿಂಬಾಲಿಸಿದ್ದಾನೆ. ನಂತರ ಅಲ್ಲಿ ದಂಪತಿಯ ನಡುವೆ ದೊಡ್ಡ ಜಗಳ ನಡೆದಿದ್ದು, ಖಿಲಾವನ್‌ ತನ್ನ ಪ್ರಿಯಕರನ ಮುಂದೆಯೇ ಪತ್ನಿಯ ಮೂಗನ್ನು ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಕಿರುಚಿಕೊಳ್ಳಲು ಶುರುಮಾಡುತ್ತಿದ್ದಂತೆ, ಸ್ಥಳೀಯರು ಮತ್ತು ಕುಟುಂಬ ಸದಸ್ಯರು ಆಕೆಯ ರಕ್ಷಣೆಗೆ ಬಂದಿದ್ದಾರೆ. ಆದರೆ ಆ ವೇಳೆ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಹರಿಯವಾನ್ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ, ಗಾಯಗೊಂಡ ಮಹಿಳೆಯನ್ನು ಹಾರ್ದೋಯ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ.

Related Articles

Back to top button
error: Content is protected !!