ಯುವಜನ

ಪಾರ್ಟಿಗೆಂದು ಗೋವಾಕ್ಕೆ ಕರೆಸಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ 

Views: 325

ಕನ್ನಡ ಕರಾವಳಿ ಸುದ್ದಿ: ಪಾರ್ಟಿಗೆಂದು ಮೂವರು ಅಪ್ರಾಪ್ತ ಬಾಲಕಿಯರನ್ನು ಗೋವಕ್ಕೆ ಕರೆಸಿ ಸ್ನೇಹಿತರಿಂದಲೇ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಜೂನ್ 8 ರಂದು ಈ ಘಟನೆ ನಡೆದಿದ್ದು, ಹುಡುಗಿಯರ ಪೋಷಕರು ಪೊಲೀಸರ ಬಳಿ ನಾಪತ್ತೆ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಅತ್ಯಾಚಾರಕ್ಕೆ ಒಳಗಾದ ಒಬ್ಬಳು 11 ವರ್ಷ ಇನ್ನೊಬ್ಬಳು 13 ವರ್ಷ ಮತ್ತು 15 ವರ್ಷದ ಬಾಲಕಿಯರು ಎಂದು ತಿಳಿದುಬಂದಿದೆ.

ಅವರಲ್ಲಿ ಇಬ್ಬರು ಒಡಹುಟ್ಟಿದವರು. ಪೊಲೀಸರ ಪ್ರಕಾರ, ಹುಡುಗಿಯರು ಆರೋಪಿಗಳ ಸ್ನೇಹಿತರಾಗಿದ್ದರು ಮತ್ತು ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಿಂದ ಇವರು ಹೋಗಿದ್ದರು ಎನ್ನಲಾಗಿದೆ.

ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿದ ನಂತರ ಅದೇ ದಿನ ಕ್ಯಾಲಂಗುಟ್ ಬೀಚ್‌ನಲ್ಲಿರುವ ಹೋಟೆಲ್‌ನಿಂದ ಅವರನ್ನು ಬಂಧಿಸಲಾಗಿದೆ.

ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button