ಜನಮನ

ಆಪರೇಷನ್ ಸಿಂಧೂರ್-2.0 ಭಾರತದ ಡ್ರೋನ್ ದಾಳಿಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಧ್ವಂಸ

Views: 164

ಕನ್ನಡ ಕರಾವಳಿ ಸುದ್ದಿ: ಪಾಕಿಸ್ತಾನ ಉಗ್ರರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ್-2.0 ಕಾರ್ಯಾಚರಣೆ ಆರಂಭಿಸಿದ್ದು, ಪಾಕಿಸ್ತಾನದ ವಿವಿಧ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ನಿನ್ನೆ ರಾತ್ರಿ ಭಾರತದ 15 ನಗರಗಳ ಟಾರ್ಗೆಟ್ ಮಾಡಿ ದಾಳಿಗೆ ಯತ್ನಿಸಿತ್ತು. ಇದನ್ನು ಭಾರತೀಯ ಸೇನೆ ಏರ್ ಡಿಫೆನ್ಸ್ ಸಿಸ್ಟಮ್ S-400 ಮೂಲಕ ವಿಫಲಗೊಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್-2.0 ಕಾರ್ಯಾಚರಣೆ ಆರಂಭಿಸಿದ್ದು, ಪಾಕಿಸ್ತಾನದ ಹಲವು ನಗರಗಳ ಮೇಲೆ ನಿರಂತರ ಡ್ರೋನ್ ದಾಳಿ ನಡೆಸಿದೆ.

ಲಾಹೋರ್ ನಲ್ಲಿ ಸೇನಾನೆಲೆ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, ಸೇನಾ ನೆಲೆ ಧ್ವಂಸಗೊಳಿಸಿದೆ. ಇನ್ನೊಂದೆಡೆ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋನ್ ದಾಳಿ ನಡೆಸಿದೆ. ಸ್ಟೇಡಿಯಂ ಧ್ವಂಸಗೊಂಡಿದೆ.

ಭಾರತದ ದಾಳಿ ಬೆನ್ನಲ್ಲೇ ಪಿಸಿಬಿ ಕ್ರಿಕೆಟ್ ಆಟಗಾರರು ರಾವಲ್ಪಿಂಡಿ ತೊರೆಯುವಂತೆ ಸೂಚನೆ ನೀಡಿದೆ.

Related Articles

Back to top button
error: Content is protected !!