ಯುವಜನ
ಆಲವೇರಾ ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿ ಶಾಲಾ ಬಾಲಕಿ ಸಾವು

Views: 82
ಕನ್ನಡ ಕರಾವಳಿ ಸುದ್ದಿ: ಆಲವೇರಾ ಜ್ಯೂಸ್ ಎಂದು ತಪ್ಪಾಗಿ ಭಾವಿಸಿ ಕ್ರಿಮಿನಾಶಕ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ನಡೆದಿದೆ.
ನಿಧಿ ಕೃಷ್ಣ (14) ಮೃತ ಬಾಲಕಿ. 9ನೇ ತರಗತಿ ಓದುತ್ತಿದ್ದ ಬಾಲಕಿ ಆರೋಗ್ಯ ಕಾಪಾಡಿಕೊಳ್ಳಲೆಂದು ಪ್ರತಿದಿನ ಆಲೋವೇರಾ ಜ್ಯೂಸ್ ಕುಡಿಯುತ್ತಿದ್ದಳು. ಆಲವೇರಾ ಜ್ಯೂಸ್ ಖಾಲಿ ಡಬ್ಬದಲ್ಲಿ ಮನೆಯವರು ಗಿಡಕ್ಕೆ ಬಳಸುವ ಹರ್ಬಿಸೈಡ್ ಔಷಧ ತುಂಬಿಟ್ಟಿದ್ದರು.ಎಂದಿನಂತೆ ನಿಧಿ ಆಲವೇರಾ ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿಬಿಟ್ಟಿದ್ದಾಳೆ. ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.