ಸಾಂಸ್ಕೃತಿಕ

ಮುಂದಿನ ತಿಂಗಳು ಅನುಶ್ರೀ ಮದುವೆನಾ?

Views: 133

ಕನ್ನಡ ಕರಾವಳಿ ಸುದ್ದಿ: ಚಿಕ್ಕಣ್ಣ ಹಾಗೂ ಅನುಶ್ರೀ ಮದುವೆ ಆಗ್ತಾ ಇದಾರೆ ಅಂತ. ಈ ಬಗ್ಗೆ ವೇದಿಕೆ ಮೇಲೆ ಒಮ್ಮೆ ಅನುಶ್ರೀ ಮಾತನಾಡಿದ್ದರು. ಚಿಕ್ಕಣ್ಣ ಇರುವಾಗಲೇ ಹೇಳಿಕೊಂಡು ನಕ್ಕಿದ್ದರು.

ಚಿಕ್ಕಣ್ಣ ಆದ್ಮೇಲೆ ಈಗ ರಾಜ್ ಬಿ ಶೆಟ್ಟಿ ಜೊತೆಗೆ ಅನುಶ್ರೀ ಹೆಸರನ್ನು ತಳುಕು ಹಾಕುತ್ತಿದ್ದಾರೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಬೇರೆ ಯಾರೂ ಅಲ್ಲ ಅದು ರಾಜ್ ಬಿ ಶೆಟ್ಟಿ ಎಂದು ಟ್ರೋಲ್ ಮಾಡ್ತಾ ಇದಾರೆ. ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಆತ್ಮೀಯರೆ. ಒಂದೇ ಊರಿನ ಕಡೆಯವರು. ಜೊತೆಗೆ ರಾಜ್ ಬಿ ಶೆಟ್ಟಿಯವರನ್ನು ನನ್ನ ಆಧ್ಯಾತ್ಮದ ಗುರು ಎಂದೇ ಅನುಶ್ರೀ ಕರೆಯುತ್ತಾರೆ.

ಅನುಶ್ರೀ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಹೋಗಿದ್ರು. ಅದರಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಕಿರಣ್ ರಾಜ್ ಕೂಡ ಇದ್ದರು. ಅದೇ ಫೋಟೋಗಳನ್ನು ತೋರಿಸಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಮದುವೆ ಆಗ್ತಿಲ್ವಾ ಅನುಶ್ರೀ? ಈ ವರ್ಷ ಅಂದ್ರೆ ಮಾರ್ಚ್ 17 ಅಪ್ಪು ಹುಟ್ಟು ಹಬ್ಬದ ದಿನ ಅನುಶ್ರೀ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೇನೆ ಎಂದಿದ್ದರು.

ಈಗ ಅನುಶ್ರೀ ಕೈ ಹಿಡಿಯುವ ಹುಡುಗನ ಬಗ್ಗೆ ಏನೇನೋ ಚರ್ಚೆಗಳು ನಡೆಯುತ್ತಿವೆ. ಹೆಚ್ಚಿನವರು ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಮದುವೆ ಆಗಬಹುದು ಅಂತ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎಷ್ಟೋ ಕಡೆ ಅನುಶ್ರೀ ಅವರೇ, ನನಗೆ ಬಹಳ ಇಷ್ಟವಾದ ವ್ಯಕ್ತಿ ರಾಜ್ ಬಿ ಶೆಟ್ಟಿ ಅಂತಿದ್ದಿದ್ದರು. ಸೋ, ಗೆಸ್‌ ಲಿಸ್ಟ್ ನಲ್ಲಿ ಫಸ್ಟ್ ಹೆಸರು ಅವರದ್ದಿದ್ದೆ. ಇದಕ್ಕೆ ಸರಿಯಾದ ಉತ್ತರ ಅನುಶ್ರೀ ಶೀಘ್ರ ನೀಡಲಿದ್ದಾರೆ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

 

Related Articles

Back to top button
error: Content is protected !!