ಸಾಂಸ್ಕೃತಿಕ

ಬಿಗ್‌ಬಾಸ್ ನಂತರ ಕಲರ್ಸ್‌ ಕನ್ನಡದ ಹೊಸ ರಿಯಾಲಿಟಿ ಶೋ ನಲ್ಲಿ ಚೈತ್ರಾ ಕುಂದಾಪುರ

Views: 142

ಕನ್ನಡ ಕರಾವಳಿ ಸುದ್ದಿ: ಬಿಗ್‌ಬಾಸ್ ಸೀಸನ್ 11 ರಲ್ಲಿ ಸಖತ್ ಫೇಮಸ್ ಆಗಿದ್ದ ಚೈತ್ರಾ ಕುಂದಾಪುರ ಇದೀಗ ಹೊಸ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಲಿದ್ದಾರೆ.

ಬಿಗ್ ಬಾಸ್ ಕನ್ನಡ 11’ ಮುಗಿಯುತ್ತಿದ್ದಂತೆ ಹೊಸ ರಿಯಾಲಿಟಿ ಶೋ ಒಂದನ್ನು ಕಲರ್ಸ್‌ ಕನ್ನಡ ಅನೌನ್ಸ್‌ ಮಾಡಿರೋದು ಗೊತ್ತೇ ಇದೆ. ಫೆಬ್ರವರಿ 1 ರಿಂದ ಹೊಸ ರಿಯಾಲಿಟಿ ಶೋ ಆರಂಭವಾಗ್ತಿದೆ. ಅದುವೇ ‘ಬಾಯ್ಸ್ ವರ್ಸಸ್ ಗರ್ಲ್ಸ್’. ಬಾಯ್ಸ್ ಮತ್ತು ಗರ್ಲ್ಸ್ ಮಧ್ಯೆ ಮಹಾಯುದ್ಧ ನಡೆಯುವ ಶೋ ಇದಾಗಿದೆ.

ಸೋಷಿಯಲ್ ಮೀಡಿಯಾ ಇರಬಹುದು, ಟಿವಿ ಚಾನೆಲ್‌ ಇರಬಹುದು ಎಲ್ಲೆಡೆ ಚೈತ್ರಾ ಕುಂದಾಪುರ ವಿವಾದಗಳಿಂದಲೇ ಸುದ್ದಿಯಲ್ಲಿ ಇದ್ದರು ಅದರಲ್ಲೂ ಹಿಂದೂ ವಿಚಾರಧಾರೆಗಳ ಕುರಿತಾಗಿ ಆವೇಶಭರಿತವಾಗಿ ಮಾತನಾಡೋದು ಚೈತ್ರಾ ಕುಂದಾಪುರ ಅವರ ಟ್ರೇಡ್ ಮಾರ್ಕ್‌ ಆಗಿತ್ತು.

ಚೈತ್ರಾ ಕುಂದಾಪುರ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 14ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ತನ್ನ ಮಾತುಗಳ ಮೂಲಕನೇ ಸ್ಪರ್ಧಿಗಳ ಬಾಯನ್ನು ಮುಚ್ಚಿಸುತ್ತಿದ್ದ ಈಕೆ ʼಕೇಡಿ ಜೋಡಿʼ ಎಂಬ ಬಿರುದು ಪಡೆದಿದ್ದಾರೆ. ದೊಡ್ಮನೆಯಲ್ಲಿ 105 ದಿನಗಳ ಕಾಲ ಇದ್ದು, ಇದೀಗ ಈ ಶೋ ಮುಗಿದ ಬಳಿಕ ಕಲರ್ಸ್‌ ಕನ್ನಡದ ಇನ್ನೊಂದು ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದಿನಿಂದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗುತ್ತಿರುವ “ಬಾಯ್ಸ್‌ ವರ್ಸಸ್‌ ಗರ್ಲ್ಸ್‌” ಎಂಬ ಹೊಸ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದಾರೆ. ಬಾಯ್ಸ್ ಮತ್ತು ಗರ್ಲ್ಸ್ ಮಧ್ಯೆ ಮಹಾಯುದ್ಧ ನಡೆಯುವ ಶೋ ಇದಾಗಿದೆ. ಈ ಶೋನಲ್ಲಿ ರಜತ್ ಕಿಶನ್‌, ಭವ್ಯಾ ಗೌಡ ಹಾಗೂ ಹನುಮಂತ ಕೂಡ ಇರಲಿದ್ದಾರೆ ಎನ್ನಲಾಗಿದೆ. ಇನ್ನು ಪ್ರತಿ ಶನಿವಾರ-ಭಾನುವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರವಾಗಲಿದೆ.

Related Articles

Back to top button
error: Content is protected !!