ಸಾಂಸ್ಕೃತಿಕ

ರುದ್ರಾಕ್ಷಿ ಮಾಲೆ ಮಾರುವ ಮೊನಾಲಿಸಾಗೆ ಒಲಿದ ಅದೃಷ್ಟ! ಇನ್ಮುಂದೆ ಈಕೆ ಸಿನಿಮಾ ನಟಿ, ಯಾವ ಸಿನಿಮಾ ಗೊತ್ತಾ?

Views: 188

ಕನ್ನಡ ಕರಾವಳಿ ಸುದ್ದಿ: ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಚೆಲುವೆ ರಾತ್ರೋ ರಾತ್ರಿ ಇಡಿ ಭಾರತದಲ್ಲಿಯೇ ಫೇಮಸ್ ಆದ್ರೂ.ಅದೃಷ್ಟವೀಗ ಅವರನ್ನು ಹುಡುಕಿಕೊಂಡು ಅವರ ಮನೆಯ ಬಾಗಿಲಿಗೆನೇ ಬಂದಿದೆ.ಮೋನಾಲಿಸಾ ಇನ್ನೇನು ಕೆಲವೇ ದಿನಗಳಲ್ಲಿ ಬಾಲಿವುಡ್ ಸಿನಿಮಾದ ಮೂಲಕ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದ್ದಾರೆ.

16 ವರ್ಷದ ಹುಡುಗಿ ಮಧ್ಯಪ್ರದೇಶದ ಖಾರ್ಗೊನ್ ಜಿಲ್ಲೆಯ ಈ ಹುಡುಗಿ ಕುಂಭಮೇಳದಲ್ಲಿ ಕಂಡು ಸೋಷಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳ ತಲೆ ಬರಹದಲ್ಲಿ ಸುದ್ದಿಯಾಗಿ ಮಿಂಚಿದ್ದರು. ಈಗ ಮತ್ತೆ ಸುದ್ದಿಗೆ ಬಂದಿರುವ ಮೋನಾಲಿಸಾ ಹಿಂದಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಇತ್ತೀಚೆಗೆ ಬಂದ ವರದಿಯ ಪ್ರಕಾರ. “ದಿ ಡೈರಿ ಆಫ್ ಮನಿಪುರ” ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಿನಿಮಾರದ ರೈಟರ್ ಹಾಗೂ ಡೈರಕ್ಟರ್ ಸನೋಜ್ ಮಿಶ್ರಾ ಮೋನಾಲಿಸಾ ಮನೆಗೆ ಭೇಟಿ ಕೊಟ್ಟು ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರೆ. ಅದು ಮಾತ್ರವಲ್ಲ ಈ ವಿಷಯವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿಯೂ ಕೂಡ ಹಂಚಿಕೊಂಡಿದ್ದಾರೆ.

ನಾನು ಡೈರಿ ಆಫ್ ಮಣಿಪುರ ಸಿನಿಮಾದಲ್ಲಿ ಮೋನಾಲಿಸಾಗೆ ಪಾತ್ರ ನೀಡುತ್ತಿದ್ದೇನೆ. ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಅವರನ್ನು ಹುಡುಕಿಕೊಂಡು ನಾನು ಪ್ರಯಾಗರಾಜ್ಗೂ ಕೂಡ ಹೋಗಿದ್ದೆ. ಈಗ ಅವರ ಗ್ರಾಮಕ್ಕೆ ಬಂದಿದ್ದೇನೆ. ಇಡೀ ಕುಟುಂಬವೇ ತುಂಬಾ ಮುಗ್ದ ಮನಸ್ಸಿನ ಕುಟುಂಬ. ಈ ಹುಡುಗಿಯನ್ನು ನಾವು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕಿದೆ ಎಂದು ಹೇಳಿದ್ದಾರೆ.

ಮಹಾಕುಂಭಮೇಳಕ್ಕೆ ರುದ್ರಾಕ್ಷಿಯ ಹಾರ ಹಾಗೂ ಹೂವಿನ ಹಾರ ಮಾರಲು ಬಂದ ಹುಡುಗಿ ಶತಮಾನದ ಹಿಂದಿನ ಸುಂದರಿ ಮೋನಾಲಿಸಾ ಮರಳಿ ಬಂದಂತೆ ಫೇಮಸ್ ಆಗಿದ್ದು ಈಗ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶವನ್ನು ಕೂಡ ಪಡೆದುಕೊಂಡಿದ್ದಾರೆ. ಅದೃಷ್ಟ ಅಂದ್ರೆ ಇದೇ ಅಲ್ವಾ. ಹೂ ಮಾರುವ ಹುಡುಗಿ ಈಗ ಹೀರೋಯಿನ್ ಆಗುವ ಮಟ್ಟಕ್ಕೆ ಹೋಗಿದ್ದು ನಿಜಕ್ಕೂ ಖುಷಿಯ ಸಂಗತಿ.

Related Articles

Back to top button
error: Content is protected !!