ಯುವಜನ

ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಸ್ನಾತಕೋತ್ತರ ವಿದ್ಯಾರ್ಥಿ ಸಾವು

Views: 121

ಕನ್ನಡ ಕರಾವಳಿ ಸುದ್ದಿ: ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಸ್ನಾತಕೋತ್ತರ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.

ಮೃತನನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ಗುಜರಾತ್ ಮೂಲದ ನಿಲಯ್ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ.

ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್ನಲ್ಲಿರುವ ಸ್ನೇಹಿತನ‌ ಕೊಠಡಿಯಲ್ಲಿ ನಿಲಯ್ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

Back to top button
error: Content is protected !!