ಯುವಜನ
ಹೊಸ ವರ್ಷದ ಪಾರ್ಟಿ:ಮನಸಾರೆ ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಪ್ರೇಯಿಸಿ!

Views: 225
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಪ್ರಿಯಕರನನ್ನೇ ಪ್ರೇಯಿಸಿ ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ.
ಪ್ರಿಯಕರ 25 ವರ್ಷದ ಮನುಕುಮಾರ್ ಸ್ಥಿತಿ ಗಂಭೀರವಾಗಿದೆ
ಹಾಸನದ ಮನುಕುಮಾರ್ ಮತ್ತು ಭವಾನಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಮನಸ್ತಾಪ ಬಂದು ದೂರವಾಗಿದ್ದರು. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್ಗೆ ಮನುಕುಮಾರ್ ಬಂದಿದ್ದರು.
ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ಬಿಡಿಸಲು ಮನುಕುಮಾರ್ ಗೆಳೆಯರು ಬಂದಿದ್ದಾರೆ. ಇದೇ ವೇಳೆ ಏಕಾಏಕಿ ಚಾಕುವಿನಿಂದ ಮನುಕುಮಾರ್ಗೆ ಇರಿದಿದ್ದಾಳೆ.
ಸದ್ಯ ಮನುಕುಮಾರ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.






