ಯುವಜನ
ಕ್ರಿಸ್ಮಸ್ ಹಬ್ಬಕ್ಕೆ ತಯಾರಿಯಲ್ಲಿರುವಾಗ ಕರೆಂಟ್ ಶಾಕ್: ಬಾಲಕ ಸಾವು
Views: 68
ಕನ್ನಡ ಕರಾವಳಿ ಸುದ್ದಿ:ಕ್ರಿಸ್ಮಸ್ ಹಬ್ಬಕ್ಕೆ ತಯಾರಿಯಲ್ಲಿರುವಾಗ ಕರೆಂಟ್ ಶಾಕ್ ಆಗಿ ಶಾಲಾ ವಿದ್ಯಾರ್ಥಿ ಮೃತಪಟ್ಟ ಘಟನೆ ಡಿ.19ರ ಗುರುವಾರ ಸಂಭವಿಸಿದೆ.
ತಾಲೂಕಿನ ಪೆರೋಡಿತ್ತಾಯನ ಕಟ್ಟೆ ಶಾಲೆ ಬಳಿ ನಿವಾಸಿ ಬೆಳ್ತಂಗಡಿ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ದಿ.ಸ್ಟ್ಯಾನ್ಲಿ ಡಿಸೋಜ ಅವರ ಪುತ್ರ ಸ್ಟೀಫನ್ (14) ಮೃತಪಟ್ಟರು.
ಸ್ಟೀಫನ್ ಮನೆಗೆ ಕ್ರಿಸ್ಮಸ್ ಅಂಗವಾಗಿ ಸಂಜೆ ಸಾಂತಾಕ್ಲಾಸ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು.
ಕಳೆದ ಕೆಲ ವರ್ಷಗಳ ಹಿಂದೆ ಹೆತ್ತವರನ್ನು ಕಳೆದುಕೊಂಡಿದ್ದ ಅವರು ಅಜ್ಜಿ ಹಾಗೂ ಮಾವನ ಆಶ್ರಯದಲ್ಲಿದ್ದರು. ಘಟನೆ ನಡೆದ ಸಮಯ ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ.