ಜನಮನ
ಲೋಕಾಯುಕ್ತ ದಾಳಿ: 9 ಲಕ್ಷ ರೂ. ಹಣವನ್ನು ಮನೆಯ ಶೌಚಾಲಯದ ಕಿಟಕಿಯ ಮೂಲಕ ಹೊರಗೆಸೆದ ಭ್ರಷ್ಟ ಅಧಿಕಾರಿ!
Views: 92
ಕನ್ನಡ ಕರಾವಳಿ ಸುದ್ದಿ: ರಾಜ್ಯಾದಾದ್ಯಂತ ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್ ನೀಡಿದ್ದಾರೆ. ಹಾವೇರಿ ನಗರದಲ್ಲಿರುವ ಬಸವೇಶ್ವರನಗರದ 1 ನೇ ಕ್ರಾಸ್ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ನಸುಕಿನಲ್ಲಿ ಅಧಿಕಾರಿಗಳ ತಂಡ ಬಾಗಿಲು ಬಡಿದಿತ್ತು. ಅವರನ್ನು ನೋಡಿ ಗಾಬರಿಗೊಂಡ ಕಾಶಿನಾಥ್, ಕೊಠಡಿಗೆ ಹೋಗಿ 9 ಲಕ್ಷ ನಗದಿನ ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದರು. ಬಾಗಿಲು ತೆರೆಸಿ ನಂತರ ಒಳಗೆ ಬಂದ ಅಧಿಕಾರಿಗಳು, ಗಂಟು ಪತ್ತೆ ಮಾಡಿದ್ದಾರೆ. ₹ 2 ಲಕ್ಷ ನಗದು ಬೆಡ್ ಮೇಲೆಯೇ ಸಿಕ್ಕಿದೆ. ಜೊತೆಗೆ ಒಟ್ಟು ₹ 14 ಲಕ್ಷ ಪತ್ತೆಯಾಗಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.