ಶಿಕ್ಷಣ

ಉಡುಪಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Views: 51

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿಗೆ ಜಿಲ್ಲೆಯ 16 ಶಿಕ್ಷಕರನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಿದೆ.

ಬ್ರಹ್ಮಾವರದಲ್ಲಿ ಸೆ.5ರಂದು ನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದ 6, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ತಲಾ 5 ಶಿಕ್ಷಕರು ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 10 ಮಂದಿ ಸಹ ಶಿಕ್ಷಕರು, ತಲಾ ಮೂವರು ಮುಖ್ಯ ಶಿಕ್ಷಕರು, ಪ್ರಭಾರ ಮುಖ್ಯ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ

ಗಣೇಶ್, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಲಿಮಕ್ಕಿ, ಬೈಂದೂರು ತಾಲೂಕು

ರವಿ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲಡ್ಕ ಬ್ರಹ್ಮಾವರ ತಾಲೂಕು

ಉಷಾ ಕುಮಾರಿ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಲ್ಪಾಡಿ ಮೂರು ಕೈ, ಕುಂದಾಪುರ ತಾಲೂಕು

ಸುವಾಸಿನಿ, ಸಹ ಶಿಕ್ಷಕರು – ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಳಕಾಡು, ಉಡುಪಿ ತಾಲೂಕು

ಲೀಲಾವತಿ ನಾಯ್ಕ ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ.ಟಿ.ರೋಡ್, ಕುಂದಾಪುರ ತಾಲೂಕು

ಶ್ರೀಕಾಂತ್ ಭಟ್, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆರ್ಮುಂಡೆ, ಕಾರ್ಕಳ ತಾಲೂಕು

ಹಿರಿಯ ಪ್ರಾಥಮಿಕ ಶಾಲಾ ವಿಭಾಗ

ಮಂಜುಳ ಜಯಕರ್, ಪ್ರಭಾರ ಮುಖ್ಯ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 52ನೇ ಹೇರೂರು, ಬ್ರಹ್ಮಾವರ ತಾಲೂಕು

ಶೈಲಜಾ ಶೆಟ್ಟಿ, ಮುಖ್ಯ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೂಜಾಡಿ-2, ಕುಂದಾಪುರ ತಾಲೂಕು

ವೀಣಾ ಆ‌ರ್, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಯಾ, ಕಾರ್ಕಳ ತಾಲೂಕು

ಪಾರ್ವತಿ ಎಂ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ-ಪಡು, ಕುಂದಾಪುರ ತಾಲೂಕು

ಸತೀಶ್ಚಂದ್ರ, ಮುಖ್ಯ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು-ಅಲೆವೂರು, ಉಡುಪಿ ತಾಲೂಕು

ಪ್ರೌಢಶಾಲಾ ವಿಭಾಗ

ಕೃಷ್ಣ ಶೆಟ್ಟಿ ಸಹ ಶಿಕ್ಷಕರು – ಕರ್ನಾಟಕ ಪಬ್ಲಿಕ್ ಸ್ಕೂಲ್, ಕೊಕ್ಕರ್ಣೆ, ಬ್ರಹ್ಮಾವರ ತಾಲೂಕು

ರವಿರಾಜ್ ಶೆಟ್ಟಿ ಸಹ ಶಿಕ್ಷಕರು – ಕರ್ನಾಟಕ ಪಬ್ಲಿಕ್ ಸ್ಕೂಲ್, ವಂಡ್ಸೆ, ಬೈಂದೂರು ತಾಲೂಕು

ಆರ್. ನಾರಾಯಣ ಶೆಣೈ, ಮುಖ್ಯ ಶಿಕ್ಷಕರು – ಶ್ರೀಮದ್ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ

ಶಾಂತಪ್ಪ ಮೂಲಂಗಿ, ಪ್ರಭಾರ ಮುಖ್ಯ ಶಿಕ್ಷಕರು – ಯು.ಎಸ್. ನಾಯಕ್‌ ಪ್ರೌಢಶಾಲೆ, ಪಟ್ಟ, ಉಡುಪಿ ತಾಲೂಕು

ಪಿಯುಷ್‌ ಡಿ’ಸೋಜಾ, ಸಹ ಶಿಕ್ಷಕರು – ಸರ್ಕಾರಿ ಪ್ರೌಢಶಾಲೆ, ಬಸ್ರೂರು, ಕುಂದಾಪುರ ತಾಲೂಕು

 

 

Related Articles

Back to top button
error: Content is protected !!