ಜನಮನ

ಬೆಂಗಳೂರು:ಎರಡೂವರೆ ವರ್ಷದ ಮಗು ಹಾಡಹಗಲೇ ಕಿಡ್ನ್ಯಾಪ್!

Views: 300

ಕನ್ನಡ ಕರಾವಳಿ ಸುದ್ದಿ: ಮನೆ ಹೊರಗೆ ಆಟವಾಡುತ್ತಿದ್ದ ಮಗುವನ್ನು ಕಳ್ಳಿಯೊಬ್ಬಳು ಅಪರಹರಿಸಿ ಎಸ್ಕೇಪ್ ಆಗಿದ್ದಳು. ಮಗುವಿನ ಮನೆಯಿರುವ ಪ್ರದೇಶದಲ್ಲೇ ಸುತ್ತಾಡಿ ಸಲೀಸಾಗಿ ಮಗುವನ್ನ ಕರೆದುಕೊಂಡು ಪರಾರಿಯಾಗಿದ್ದಳು. ಮಗಳಿಗಾಗಿ ಹೆತ್ತವರು ಬೆಳಗ್ಗೆಯಿಂದ ರಾತ್ರಿವರೆಗೂ ಬೆಂಗಳೂರಿನ ಬೀದಿ ಬೀದಿಯಲ್ಲಿ ಸುತ್ತಾಡಿದ್ದರು. ಆದರೆ ಕೊನೆಗೆ ಪೊಲೀಸರು ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯೊಬ್ಬರು ಮಗುವನ್ನು ಮೊದಲು ಮಾತನಾಡಿಸಿ ಬಳಿಕ ಯಾರಿಗೂ ಗೊತ್ತೇ ಆಗದಂತೆ ಮಗುವನ್ನು ಅಪಹರಣ ಮಾಡಿಕೊಂಡು ಕರೆದೊಯ್ಯುದಿದ್ದಾಳೆ. ಅಂದಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ಮಲ್ಲೇಶ್ವರಂ  ಮಾರಮ್ಮ ದೇವಸ್ಥಾನದ ಬಳಿ. ಎರಡೂವರೆ ವರ್ಷದ ಮಗುವನ್ನು ಹಾಡಹಗಲೇ ಅಪಹರಣ ಮಾಡಿಕೊಂಡು ಮಹಿಳೆ ಎಸ್ಕೇಪ್ ಆಗಿದ್ದಳು. ಬೆಳಗ್ಗೆಯಿಂದ ರಾತ್ರಿವರೆಗೆ ಮಗುಗಾಗಿ ಹುಡುಕಾಡಿರುವ ಪೋಷಕರು ಬಳಿಕ ಮಗು ಸಿಕ್ಕರೇ ತಂದು ಕೊಡಿ ಅಂತ ಮನವಿ ಮಾಡಿದ್ದರು

ಬೆಳಗ್ಗೆ 9:30ಕ್ಕೆ ದೊಡ್ಡ ಮಗಳನ್ನು ಶಾಲೆಗೆ ರೆಡಿ ಮಾಡುತ್ತಿದ್ದೆ, ಚಿಕ್ಕವಳು ಯಾವಾಗ ಕೆಳಗೆ ಹೋದಳು ಅಂತ ಗೊತ್ತಾಗಲಿಲ್ಲ. ಕೆಳಗೆ ಬಂದು ನೋಡಿದರೆ ಮಗು ಇರಲಿಲ್ಲ. ಆ ಮಹಿಳೆ ಇಲ್ಲೇ ಇರುವವಳಂತೆ. ಅವಳು ಯಾರು ಅಂತ ನಮಗೂ ಗೊತ್ತಿಲ್ಲ.

ನಿನ್ನೆ ಬೆಳಗ್ಗೆ 9.20 ರ ಸುಮಾರಿಗೆ ಹೆಣ್ಣು ಮಗುವನ್ನು ಮಹಿಳೆ ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದಳು. ದಿವ್ಯಾ ಭಾರತಿ ಮತ್ತು ಲೋಕೇಶ್ ದಂಪತಿಯ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿದ್ದಳು. ಮೊದಲ ಮಗುವನ್ನು ಶಾಲೆಗೆ ಕಳಿಸಲು ತಾಯಿ ರೆಡಿ ಮಾಡುತ್ತಿದ್ದಾಗ ಎರಡೂವರೆ ವರ್ಷದ ಮಗು ಹೊರಗೆ ಆಟವಾಡುತ್ತಿದ್ದಳು. ಆಗ ಮನೆ ಬಳಿ ಬಂದ ಸುಜಾತ ಎನ್ನುವ ಮಹಿಳೆ ಕಿಡ್ನ್ಯಾಪ್ ಮಾಡಿದ್ದಾಳೆ. ಆರೋಪಿ ಸುಜಾತಾ ಕೂಡ ಮಗು ಇದ್ದ ಏರಿಯಾದಲ್ಲೇ ಇದ್ದಳು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳಬೇಕು. ಅಪರಿಚಿತರ ಜೊತೆ ಮಾತನಾಡಬಾರದು, ಹೋಗಬಾರದು ಅಂತೆಲ್ಲ ಹೆತ್ತವರು ತಿಳಿ ಹೇಳಬೇಕು. ಇಲ್ಲದಿದ್ರೆ ಈ ರೀತಿ ಕಳ್ಳರು ನಿಮ್ಮ ಮಕ್ಕಳನ್ನು ಕದ್ದು ತಪ್ಪು ದಾರಿಗೆ ಬಳಸಿಕೊಳ್ಳುತ್ತಾರೆ. ಸದ್ಯ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರು ಆರೋಪಿ ಸುಜಾತಳನ್ನು ಬಂಧಿಸಿದ್ದಾರೆ.

 

Related Articles

Back to top button
error: Content is protected !!