ಜನಮನ

ಹೆಬ್ರಿ: ಮುದ್ರಾಡಿಯಲ್ಲಿ ಹಠಾತ್ ಮೇಘ ಸ್ಫೋಟ: ಮನೆ ಜಲಾವೃತ, ಕೊಚ್ಚಿ ಹೋದ ವಾಹನ,ಜಾನುವಾರುಗಳು, ಅಪಾರ ಹಾನಿ 

Views: 387

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮುದ್ರಾಡಿಯಲ್ಲಿ ಭಾನುವಾರ ಮಧ್ಯಾಹ್ನ ಹಠಾತ್ ಸುರಿದ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.

ಮಧ್ಯಾಹ್ನ 2.30ರಿಂದ 3.45ರವರೆಗೆ ಸುರಿದ ಬಿರುಸಿನ ಮಳೆಗೆ ಮುದ್ರಾಡಿಯ ಹೊಸ ಕಂಬ್ಲದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3 ಮನೆಗಳು ಅರ್ಧದಷ್ಟು ಮುಳುಗಿದ್ದವು. ಮನೆಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಹೊರ ಕರೆತರಲಾಗಿದೆ.

ಭಾರೀ ಗುಡುಗು– ಸಿಡಿಲು ಸಹಿತ ಮಳೆಯಾಗಿದ್ದು, 2 ಕಾರುಗಳು ಮತ್ತು ಬೈಕ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕಬ್ಬಿನಾಲೆಯ ಬೆಟ್ಟದ ಭಾಗದಿಂದ ಒಂದೇ ಸವನೆ ನೀರು ನುಗ್ಗಿ ಬಂದಿದೆ.ಬಾರಿ ಸಿಡಿಲು ಗಾಳಿಯಿಂದ ಕೂಡಿದ ಮಳೆ ಸುರಿಯಿತು. ನದಿಯಲ್ಲಿ ಹಠಾತ್ ಆಗಿ ಕೆಸರು ಮಿಶ್ರಿತ ತುಂಬಿದ ನೀರು ಹರಿದು ಬಂದು ಅವಾಂತರ ಸೃಷ್ಟಿಸಿದೆ.

ಇಲ್ಲಿನ ಸುತ್ತಮುತ್ತ ತೋಟಗಳು ಸಂಪೂರ್ಣ ಜಲಾವೃತಗೊಂಡಿದ್ದು ಬಾರಿ ಮಳೆಯಿಂದಾಗಿ ಸುಮಾರು 25ಕ್ಕೂ ಮಿಕ್ಕಿ ಗದ್ದೆಗಳ ಪೈರು ಹಾಗೂ ಅಡಿಕೆ ಬಾಳೆ ತೋಟಗಳು ಹಾನಿಗೊಂಡಿದೆ ಎಂದು. ಸ್ಥಳೀಯರು ತಿಳಿಸಿದ್ದಾರೆ.

ಆಗುಂಬೆ ಘಾಟಿ ಪ್ರದೇಶದಲ್ಲಿ ಸುರಿದ ಬಾರಿ ಮಳೆಯಿಂದ ಕಬ್ಬಿನಾಲೆ ಗುಡ್ಡ ಬೆಟ್ಟಗಳಲ್ಲಿ ಒಂದೇ ಸವನೆ ನೀರು ನುಗ್ಗಿ ಅನಾಹುತ ಸಂಭವಿಸಿದೆ ತಿಳಿಯಲಾಗಿದೆ.

15 ಕ್ಕೂ ಹೆಚ್ಚು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 85 ವರ್ಷ ಪ್ರಾಯದ ಚಂದ್ರ ಗೌಡತಿ ಮನೆ ಹೊರಗಿನ ಶೌಚಾಲಯಕ್ಕೆ ಹೋದಾಗ ನಾಪತ್ತೆಯಾಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ 9ರ ತನಕ ಹುಡುಕಿದರೂ ವೃದ್ಧೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಜಲ ಪ್ರವಾಹ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮುನಿಯಾಲು ಪಡುಕುಡೂರು ನೆಕ್ಕರ್ಬೆಟ್ಟು ಬೇಬಿ ಶೆಟ್ಟಿ ಎಂಬುವವರ ಮನೆಗೆ ಸಿಡಿಲು ಬಡಿದು ಮನೆಯ ಕಂಪೌಂಡ್‌ಗೆ ಹಾನಿಯಾಗಿದೆ. ವಿದ್ಯುತ್ ತಂತಿಗಳು ಸುಟ್ಟು ಹೋಗಿವೆ. ಹೆಬ್ರಿಯ ವಿವಿಧೆಡೆ ಮಿಂಚು, ಗುಡುಗು ಸಹಿತ ಮಳೆಯಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್‌ ಕುಮಾರ್‌ ಕುಕ್ಕುಜೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಬಂದ್‌ ಆಗಿದ್ದು, ಬದಲಿ ರಸ್ತೆಯ ಮೂಲಕ ವಾಹನಗಳು ಸಂಚರಿಸುತ್ತಿವೆ.

Related Articles

Back to top button
error: Content is protected !!