ಸೆ.15: ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘ ವಾರ್ಷಿಕ ಮಹಾಸಭೆ-ಪ್ರಶಸ್ತಿ ಪ್ರದಾನ

Views: 261
ಮುಂಬಯಿ :ಪದ್ಮಶಾಲಿ ಸಮಾಜ ಸೇವಾ ಸಂಘದ 88ನೇ ವಾರ್ಷಿಕ ಮಹಾಸಭೆ, ಪದ್ಮಶಾಲಿ ಎಜುಕೇಶನ್ ಸೊಸೈಟಿಯಿಂದ 49ನೇ ವಾರ್ಷಿಕ ಮಹಾಸಭೆ, ಬಹುಮಾನ ವಿತರಣೆ ಮತ್ತು ಪದ್ಮಶಾಲಿ ಮಹಿಳಾ ಬಳಗದ 36ನೇ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಸೆಪ್ಟೆಂಬರ್ 15ರಂದು ಬೆಳಿಗ್ಗೆ ಮುಲುಂಡ್ ಪಕ್ಷಿಮದ ಮಹಾರಾಷ್ಟ್ರ ಸೇವಾ ಸಂಘ ಸಭಾಗ್ರಹದಲ್ಲಿ ನಡೆಯಲಿದೆ.
ಪದ್ಮಶಾಲಿ ಸಮಾಜ ಸೇವಾ ಸಂಘದ 88ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉತ್ತಮ್.ಎ.ಶೆಟ್ಟಿಗಾರ್, ಪದ್ಮಶಾಲಿ ಎಜುಕೇಶನ್ ಸೊಸೈಟಿಯ 49ನೇ ವಾರ್ಷಿಕ ಮಹಾಸಭೆ ಸಭಾಪತಿ ಬಿ.ರಾಮಚಂದ್ರ ಶೆಟ್ಟಿಗಾರ್ ವಹಿಸಲಿದ್ದಾರೆ.
ಮಹಾಸಭೆಯ ಮೊದಲು ಮಹಿಳೆಯರಿಗೆ ಅರಸಿನ ಕುಂಕುಮ ಕಾರ್ಯಕ್ರಮ ಜರಗಲಿದೆ. ಮಹಾಸಭೆ ಬಳಿಕ ಶಾಲಾ- ಕಾಲೇಜು ಮತ್ತು ಇತರ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 2ಕ್ಕೆ ಸ್ಪೂರ್ತಿ ವಿಶೇಷ ಶಾಲೆ ಮೂಡುಬಿದಿರೆ ಸಂಸ್ಥಾಪಕ ಪ್ರಕಾಶ್.ಜೆ.ಶೆಟ್ಟಿಗಾರ್ ಅವರಿಗೆ “ಪದ್ಮ ಪ್ರತಿಭಾ- 2024” ಪುರಸ್ಕಾರ ನೀಡಲಾಗುವುದು. ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಅವರಿಗೆ “ಪದ್ಮ ಕಲಾ ತಪಸ್ವಿ” ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅಪರಾಹ್ನ 3:30ಕ್ಕೆ ಮಹಿಳಾ ಬಳಗದವರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷರು, ಸೊಸೈಟಿಯ ಸಭಾಪತಿಗಳು, ಕಲಾಭವನದ ಚೇರ್ಮನ್, ಮಹಿಳಾ ವಿಭಾಗದ ಭಜನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ಸುಧಾಕರ ಶೆಟ್ಟಿಗಾರ್ ವಕ್ವಾಡಿ.ಸಂಪಾದಕರು, “ಕನ್ನಡ ಕರಾವಳಿ” ಕುಂದಾಪುರ







