ಯುವಜನ

ಮನೆಯವರೊಂದಿಗೆ ಗೌರಿ ಹಬ್ಬದ ಪೂಜೆಗೆ ತೆರಳಿದ ಬಾಲಕಿಗೆ ಹಾವು ಕಚ್ಚಿ ಸಾವು 

Views: 109

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಪೋಷಕರೊಂದಿಗೆ ಪೂಜೆಗೆ ತೆರಳಿದ್ದ ಬಾಲಕಿ ಹಾವು ಕಡಿತದಿಂದ ಮೃತಪಟ್ಟ ಧಾರುಣ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ನಡೆದಿದೆ.

ಸ್ಪಂದನ(13) ಮೃತಪಟ್ಟ ಬಾಲಕಿ  ಪುರಸಭೆ ವಾಟರ್ ಮ್ಯಾನ್ ಕುಮಾರ್ ಎಂಬುವರ ಮಗಳು.

ಶುಕ್ರವಾರ ಮನೆಯವರೊಂದಿಗೆ ಗೌರಿ ಹಬ್ಬದ ನಿಮಿತ್ತ ಪಟ್ಟಣದ ವೈಕೆ ಆರ್ ಪಾರ್ಕ್ ಬಳಿ ಇರುವ ಮುಳ್ಳುಕಟ್ಟಮ್ಮ ದೇವಾಲಯಕ್ಕೆ ಪೂಜೆಗೆ ತೆರಳಿದ್ದಳು. ಬಾಲಕಿ ದೇವಾಲಯ ಸಮೀಪದಲ್ಲಿದ್ದ ಬೆಂಚ್ ಮೇಲೆ ಕುಳಿತ್ತಿದ್ದಾಗ ಹಾವು ಕಡಿತಕ್ಕೆ ಒಳಗಾಗಿದ್ದಾಳೆ.

ಪೂಜೆ ಮುಗಿಸಿಕೊಂಡು ಕುಟುಂಬದವರೊಂದಿಗೆ ಮನೆಗೆ ಬಂದ ಬಾಲಕಿ, ಕೆಲಕಾಲ ಆಟ ಆಡಿದ್ದಾಳೆ. ನಂತರ ತೀವ್ರ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾಳೆ. ಮನೆಯವರು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮತ್ತಷ್ಟು ಚಿಕಿತ್ಸೆಗೆ ಚಿಕಿತ್ಸೆಗೆ ಬೆಳ್ಳೂರ್ ಕ್ರಾಸ್ ಬಳಿ ಇರುವ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.

Related Articles

Back to top button
error: Content is protected !!