ಸೆ.15 ರಂದು ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ

Views: 74
ಕುಂದಾಪುರ: ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ (ರಿ.) ಇದರ 38ನೇ ವಾರ್ಷಿಕ ಮಹಾಸಭೆ ಹಾಗೂ 18ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ 15.09.2024 ರಂದು ರವಿವಾರ ಕೋಟೇಶ್ವರ ಶ್ರೀಮತಿ ಕಮಲಮ್ಮ ಸರ್ವೋತ್ತಮ ಬುಧ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಬೆಳಿಗ್ಗೆ 7:30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಬೆಳಿಗ್ಗೆ 9:30ರಿಂದ 38ನೇ ವರ್ಷದ ವಾರ್ಷಿಕ ಮಹಾಸಭೆ
ಸಭಾಧ್ಯಕ್ಷತೆ: ಶ್ರೀ ವಿ.ಜನಾರ್ದನ ಶೆಟ್ಟಿಗಾರ್ ವಕ್ವಾಡಿ, ಅಧ್ಯಕ್ಷರು ಪದ್ಮಶಾಲಿ ಸಮಾಜ ಸಂಘ( ರಿ) ಕೋಟೇಶ್ವರ
ಮುಖ್ಯ ಅತಿಥಿಗಳು: ಡಾ.ಶ್ರೀಮತಿ ಶಶಿಕಲಾ ಶೆಟ್ಟಿಗಾರ್ ದಕ್ಷಿಣ ಕನ್ನಡ ಜಿಲ್ಲಾ ಶ್ರೇಷ್ಠ ವೈಧ್ಯಾಧಿಕಾರಿ ಪ್ರಶಸ್ತಿ ಪುರಸ್ಕೃತರು, ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ
ಶ್ರೀ ಬಿ. ಶ್ರೀನಿವಾಸ ಶೆಟ್ಟಿಗಾರ್, ಮಾಲಕರು ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆ ಬಾರ್ಕೂರು ರಂಗನಕೇರಿ
ಶ್ರೀ ದತ್ತರಾಜ್ ಶೆಟ್ಟಿಗಾರ್ ಸಿದ್ದಕಟ್ಟೆ, ಕ್ರೀಡಾ ಸಂಚಾಲಕರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು.
ಶ್ರೀ ಸದಾಶಿವ ಗೋಳಿಜೋರ, ಹಿರಿಯ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ಮಾಜಿ ಉಪಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ) ಉಡುಪಿ.
ಶ್ರೀ ಪ್ರಭಾಕರ ಶೆಟ್ಟಿಗಾರ ವಕ್ವಾಡಿ, ಸಂಖ್ಯಾಶಾಸ್ತ್ರ ಉಪನ್ಯಾಸಕರು. ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಮಂದಾರ್ತಿ
ಡಾ. ಬಸವರಾಜ್ ಶೆಟ್ಟಿಗಾರ್, ಕಟ್ಟಡ ಸಮಿತಿ ಸಂಚಾಲಕರು, ಪದ್ಮಶಾಲಿ ಸಮಾಜ ಸಂಘ( ರಿ) ಕೋಟೇಶ್ವರ.
ಶ್ರೀಮತಿ ಸುಶೀಲಾ ಶಂಕರ್ ಶೆಟ್ಟಿಗಾರ್ ಮಹಿಳಾ ಸಂಚಾಲಕರು, ಪದ್ಮಶಾಲಿ ಸಮಾಜ ಸಂಘ( ರಿ) ಕೋಟೇಶ್ವರ.
ಸನ್ಮಾನ :ಶ್ರೀ ಮಂಜುನಾಥ ಶೆಟ್ಟಿಗಾರ್, ಅಧ್ಯಕ್ಷರು ಗ್ರಾಮ ಪಂಚಾಯತ್ ಕಾಳಾವರ
ಶ್ರೀ ಲಕ್ಷ್ಮಣ ಶೆಟ್ಟಿಗಾರ ಮಾರ್ಕೊಡು, ಸಮಾಜ ಸೇವಕರು.
ಶ್ರೀ ಸದಾಶಿವ ಶೆಟ್ಟಿಗಾರ ವಕ್ವಾಡಿ, ಸಮಾಜ ಸೇವಕರು.
ಕೋಟೇಶ್ವರ ವಲಯದ 5 ಹಿರಿಯ ಸಮಾಜ ಬಾಂಧವರಿಗೆ ಸನ್ಮಾನ
ಮಾಹಿತಿ ಕಾರ್ಯಗಾರ :ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಮುಂದೇನು..? ಹಿರಿಯ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸದಾಶಿವ ಗೋಳಿಜೋರ ಇವರಿಂದ,
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಭಾಗವಹಿಸುವಂತೆ ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಪ್ರಕಟಣೆ: ಅಪರಾಹ್ನ 2:30 ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ(ರಿ.)ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ, ಇದರ 2024- 25ರ ಸಾಲಿನ 6ನೇ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಉಭಯ ಸಂಘಗಳ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






