ರಾಜಕೀಯ
ಪುತ್ತೂರು: ರಾಜಕೀಯ ಮುಖಂಡನಿಂದ ಲೈಂಗಿಕ ದೌರ್ಜನ್ಯ:ಮಹಿಳೆ ದೂರು

Views: 77
ಪುತ್ತೂರು: ಬೆಂಗಳೂರಿನ ಹೊಟೇಲೊಂದಕ್ಕೆ ಮಹಿಳೆಯೊಬ್ಬರನ್ನು ಪುತ್ತೂರಿನ ರಾಜಕೀಯ ಮುಖಂಡನೋರ್ವರು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ನಂಬಿಕೆ ದ್ರೋಹ, ಬ್ಲಾಕ್ ಮೇಲ್, ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಸಂಘಟನೆಯೊಂದರ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ. 2023ರಲ್ಲಿ ಈ ಘಟನೆ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಛಾಯಾ ಚಿತ್ರ, ಸೆಲ್ಫಿ, ಆಡಿಯೋ, ವೀಡಿಯೋಗಳು ಇದೆ ಎಂದು ಹೇಳಿಕೊಂಡು ಬೆದರಿಸುತ್ತಿದ್ದರು ಎಂದು ಸಂತ್ರಸ್ತೆ ರವಿವಾರ ಪುತ್ತೂರಿನ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.






