ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ಪೋಷಕರಿಗೆ ವಂಚಿಸಿ, ಯುವಕನೊಂದಿಗೆ ಯುವತಿ ಪರಾರಿ

Views: 142
ಸುಳ್ಯ: ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಹಿಂದೂ ಯುವತಿಯೊಬ್ಬಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವುದಾಗಿ ಹೇಳಿ ಹೆತ್ತವರನ್ನು ನಂಬಿಸಿ ಅನ್ಯಕೋಮಿನ ಯುವಕನ ಜೊತೆ ವಿಮಾನ ನಿಲ್ದಾಣದಿಂದಲೇ ಪರಾರಿಯಾದ ಘಟನೆ ನಡೆದಿದೆ.
ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿರುವ 18 ವರ್ಷದ ದೀಕ್ಷಾ ಆ.25ರಂದು ಮನೆಯಿಂದ ಹೊರಟಿದ್ದಳು. ಆಕೆಯ ಪೋಷಕರು ಅವಿದ್ಯಾವಂತರಾಗಿದ್ದು ಈಕೆ ಹೇಳಿದ ಮಾತುಗಳನ್ನೆಲ್ಲಾ ಸತ್ಯವೆಂದು ನಂಬಿದ್ದರು. ನನಗೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವ ಅವಕಾಶ ಸಿಕ್ಕಿದೆ. ತನ್ನ ಜೊತೆ ಕಲಿತ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಬೀಳ್ಕೊಡಲು ಬಂದಿರುವುದಾಗಿಯೂ ಹೇಳಿ ಪೋಷಕರನ್ನು ನಂಬಿಸಿದ್ದಳು. ವಿಮಾನ ನಿಲ್ದಾಣದವರೆಗೂ ದೀಕ್ಷಾಳ ಜೊತೆ ಗೆಳತಿಯರೂ ಕೂಡಾ ಹೋಗಿದ್ದು ಬಳಿಕ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದಾರೆ. ಸ್ನೇಹಿತೆಯರು ಹೊರ ಹೋದಂತೆ ದೀಕ್ಷಾ ವಿಮಾನ ನಿಲ್ದಾಣದಿಂದ ಸವಣೂರಿನ ಯುವಕನ ಜೊತೆ ಬಸ್ ಹತ್ತಿ ಪರಾರಿಯಾಗಿದ್ದಾಳೆ.
ಆದರೆ ಬಸ್‌ನಲ್ಲಿದ್ದ ನಿರ್ವಾಹಕನಿಗೆ ಆಕೆಯನ್ನು ಕಂಡು ಅನುಮಾನ ಮೂಡಿದ್ದು, ಇವರಿಬ್ಬರ ಫೊಟೋ ತೆಗೆದು ಹಿಂದೂ ಸಂಘಟನೆಯವರಿಗೆ ಕಳುಹಿಸಿದ್ದಾರೆ. ಕೂಡಲೇ ಸಂಘಟನೆ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದೀಕ್ಷಾಳ ಮೊಬೈಲ್‌ನಂಬರನ್ನು ಟ್ರೇಸ್ ಮಾಡಿದ್ದಾರೆ. ಈ ವೇಳೆ ಆಕೆ ಬೆಂಗಳೂರಿನಲ್ಲಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನಿಡಿದ್ದಾರೆ. ಬೆಂಗಳೂರು ಪೊಲೀಸರ ಕಾರ್ಯಾಚರಣೆ ವೇಳೆ ಯುವತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.






