ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಶಕ್ತರಿಗೆ ವೈದ್ಯಕೀಯ ನೆರವು

Views: 65
ಕುಂದಾಪುರ: ಕುಂಭಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ವತಿಯಿಂದ 2024- 25 ನೇ ಸಾಲಿನ ಪ್ರಥಮ ಹಂತದ ಅಶಕ್ತ ಫಲಾನುಭವಿಗಳಿಗೆ ವೈದ್ಯಕೀಯ ನೆರವು ನೀಡಲಾಯಿತು.
ಪ್ರತಿಯೊಬ್ಬರಿಗೂ 10 ಸಾವಿರ ರೂಪಾಯಿ ಯಂತೆ ಮೊದಲ ಹಂತದಲ್ಲಿ 70 ಮಂದಿಗೆ 7 ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಚೆಕ್ ವಿತರಿಸಲಾಯಿತು.
1987ರಿಂದ ನಮ್ಮ ಹಿರಿಯರಾದ ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರು ಸಣ್ಣ ಮಟ್ಟದಿಂದ ಆರಂಭಿಸಿದ ಈ ಕಾರ್ಯಕ್ರಮ ಆನೆಗುಡ್ಡೆ ದೇಗುಲದ ಅಭಿವೃದ್ಧಿಯ ಜೊತೆಗೆ ಇತರ ದೇವಾಲಯಗಳಿಗೆ, ಧಾರ್ಮಿಕ ಕೇಂದ್ರ, ಶೈಕ್ಷಣಿಕ ಸಂಸ್ಥೆ ಸೇರಿದಂತೆ ಅಶಕ್ತ ರೋಗಿಗಳಿಗೆ ವೈದ್ಯಕೀಯ ನೆರವಿಗಾಗಿ ಧನ ಸಹಾಯವನ್ನು ಸುಮಾರು 37 ವರ್ಷದಿಂದಲೂ ನೀಡುತ್ತಾ ಬಂದಿದ್ದೇವೆ ಎಂದು ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ.ರಮಣ ಉಪಾಧ್ಯಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪರ್ಯಾಯ ಅರ್ಚಕ ಕೆ .ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ಅರ್ಚಕ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೆ . ರಾಜಾರಾಮ ಉಪಾಧ್ಯಾಯ ಸ್ವಾಗತಿಸಿದರು. ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ವಂದಿಸಿದರು.








