ಧಾರ್ಮಿಕ

ಹುಬ್ಬಳ್ಳಿಯಲ್ಲಿ ವೈಷ್ಣೋದೇವಿ ದೇವಸ್ಥಾನದ ಪೂಜಾರಿಯ ಭೀಕರ ಹತ್ಯೆ

Views: 86

ಹುಬ್ಬಳ್ಳಿ : ದೇವಸ್ಥಾನವೊಂದರ ಪೂಜಾರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಎಪಿಎಂಸಿ ಬಳಿಯ ಈಶ್ವರನಗರದಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ದೇವೇಂದ್ರಪ್ಪ ಹೊನ್ನಾಳಿ ಎಂಬುವರು ಹತ್ಯೆಯಾಗಿದ್ದು, ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಪೂಜಾರಿ ದೇವೇಂದ್ರಪ್ಪಜ್ಜ ಕುಸುಗಲ್ ಅವರು  (ಜುಲೈ 21) ನಡೆದ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದ ನಂತರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕೊಲೆಗೆ ನಿಖರವಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಹಂತಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ನವನಗರ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Related Articles

Back to top button
error: Content is protected !!