ಅಸೋಡು ಶ್ರೀ ಬೆಂಕಿಕಾನ್ ನಂದಿಕೇಶ್ವರ ನೂತನ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ

Views: 445
ಕುಂದಾಪುರ: ಅಸೋಡು ಶ್ರೀ ಬೆಂಕಿಕಾನ್ ನಂದಿಕೇಶ್ವರ ನೂತನ ಭಜನಾ ಮಂಡಳಿಯ ಉದ್ಘಾಟನಾ ಸಮಾರಂಭವು ಜುಲೈ 21 ರಂದು ಭಾನುವಾರ ಶ್ರೀ ಬೆಂಕಿಕಾನ್ ನಂದಿಕೇಶ್ವರ ದೇವಾಲಯದಲ್ಲಿ ನಡೆಯಿತು.
ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀ ರಮಣ ಉಪಾಧ್ಯಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಭಗವಂತನನ್ನು ಒಲಿಸಿಕೊಳ್ಳುವ ಮಾರ್ಗವೇ ಭಜನೆ. ಭಜನೆಯಿಂದ ಸಿಗುವ ಆಧ್ಯಾತ್ಮಿಕ ಜ್ಞಾನ ಇಡೀ ಊರನ್ನೇ ಬೆಳಗಲಿ. ಕಲಿಯುಗದಲ್ಲಿ ಅಧರ್ಮ, ಸ್ವಾರ್ಥಿಗಳು ತುಂಬಿರುವ ಒತ್ತಡಯುಕ್ತ ಸಮಾಜದಲ್ಲಿ ದೇವರನ್ನು ಒಲಿಸಿಕೊಳ್ಳುವ ಎಲ್ಲಾ ಮಾರ್ಗಕ್ಕಿಂತಲೂ ಭಜನೆಯೇ ಶ್ರೇಷ್ಠವಾದ ಭಕ್ತಿ ಮಾರ್ಗ ಎಂದರು.
ಮುಖ್ಯ ಅತಿಥಿ ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಭಜನೆಯಿಂದ ಊರಿನಲ್ಲಿ ಧಾರ್ಮಿಕ ಪ್ರಜ್ಞೆ, ಶಿಸ್ತು, ಏಕಾಗ್ರತೆ ಮೂಡಿಸಿ, ನಿಷ್ಕಲ್ಮಶ ಭಕ್ತಿಗೆ ಭಗವಂತನು ಶೀಘ್ರ ಒಲಿಯುತ್ತಾನೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಸೋಡು ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಜಿತ್ ಕುಮಾರ್ ಶೆಟ್ಟಿ, ಅಸೋಡು ದಯಾನಂದ ಹೆಗ್ಡೆ ,ಅಸೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಸೋಡು ರವಿರಾಜ್ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪಾರ್ವತಿ ಶೇರಿಗಾರ್, ನಂದಿಕೇಶ್ವರ ಯುವಕ ಮಂಡಲ ಅಧ್ಯಕ್ಷ ಉಮೇಶ್ ಪೂಜಾರಿ, ಅಸೋಡು ನಂದಿಕೇಶ್ವರ ದೇವಳದ ಅರ್ಚಕ ವೆಂಕಟರಮಣ ಹೆಬ್ಬಾರ್, ಶಿವಾನಂದ ಹೆಗ್ಡೆ. ಕುಂದಾಪುರ ತಾಲೂಕು ಭಜನಾ ಮಂಡಳಿಯ ಗೌರವಾಧ್ಯಕ್ಷ ಜಯಕರ ಪೂಜಾರಿ ಉಪಸ್ಥಿತರಿದ್ದರು.
ಆಡಳಿತ ಧರ್ಮದರ್ಶಿ ರಮಣ ಉಪಾಧ್ಯಾಯ ಅವರನ್ನು ಭಜನಾ ಮಂಡಳಿ ವತಿಯಿಂದ ಗೌರವಿಸಲಾಯಿತು.
ಪ್ರೋ. ಡಾ. ಅನಂತರಾಮ್ ಶೆಟ್ಟಿ ಮತ್ತು ಎಚ್ ದಯಾನಂದ ಹೆಗ್ಡೆ ಅವರು ನೀಡಿದ ಸಮವಸ್ತ್ರವನ್ನು ಭಜನಾ ತಂಡದವರಿಗೆ ಹಸ್ತಾಂತರಿಸಲಾಯಿತು.
ಅಸೋಡು ತೋಟದ ಮನೆ ದಕ್ಷತಾ ಸ್ಮಿತಾ ಶೆಟ್ಟಿ ನೀಡಿದ ತಾಳಗಳನ್ನು ತಂಡದವರಿಗೆ ನೀಡಲಾಯಿತು.
ಭಜನಾ ತಂಡದ ತರಬೇತುದರಾದ ಶ್ರೀ ರಾಘವೇಂದ್ರ ಶೆಟ್ಟಿಗಾರ ಮತ್ತು ಶ್ರೀನಿವಾಸ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಭಜನಾ ತಂಡದ ಗೌರವಾಧ್ಯಕ್ಷ ಹಾಗೂ ತರಬೇತುದಾರ ರಾಘವೇಂದ್ರ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂದೀಪ್ ಶೆಟ್ಟಿಗಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಆಯ್ದ ಭಜನಾ ಮಂಡಳಿಯವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.












