ಸಾಮಾಜಿಕ
ತನ್ನಿಷ್ಟದಂತೆ ಮದುವೆಯಾಗಿದ್ದಕ್ಕೆ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಹತ್ಯೆಗೈದು ಸುಟ್ಟು ಹಾಕಿದ ಕುಟುಂಬಸ್ಥರು

Views: 183
ತಾನು ಪ್ರೀತಿಸಿದ ಯುವಕನ ಜೊತೆ ತನ್ನಿಷ್ಟದಂತೆ ಮದುವೆಯಾಗಿದ್ದಕ್ಕೆ ಕೋಪಿಸಿಕೊಂಡ ಕುಟುಂಬಸ್ಥರು 24 ವರ್ಷದ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ರಾಜಸ್ಥಾನದ ಝಲವರ್ನಲ್ಲಿ ನಡೆದಿದೆ.
ಪತಿಯ ಎದುರಲ್ಲೇ ಕುಟುಂಬಸ್ಥರು ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಮೃತದೇಹವನ್ನು ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.
ತನಿಖೆಯಲ್ಲಿ ತಿಳಿದು ಬಂದ ಮಾಹಿತಿಯಂತೆ ಹತ್ಯೆಯಾದ ಮಹಿಳೆ ರವಿ ಭೀಲ್ ಅನ್ನೋರ ಪ್ರೀತಿಸುತ್ತಿದ್ದಳು. ಅಂತೆಯೇ ಕುಟುಂಬಸ್ಥರ ವಿರೋಧದ ನುಡುವೆಯೂ ಆಕೆ ಮದುವೆ ಆಗಿದ್ದಳು. ಮದುವೆಯಾದ ಬಳಿಕ ಹೆತ್ತವರಿಂದ ದೂರ ಆಗಿ, ಬೇರೆ ಕಡೆ ವಾಸ ಮಾಡುತ್ತಿದ್ದಳು. ಮಧ್ಯಪ್ರದೇಶದ ಗ್ರಾಮ ಒಂದರಲ್ಲಿ ವಾಸ ಮಾಡ್ತಿದ್ದಾರೆ ಅನ್ನೊದನ್ನು ತಿಳಿದುಕೊಂಡ ಕುಟುಂಬಸ್ಥರು, ಆಕೆಯನ್ನು ಅಪಹರಿಸಿ ಕೃತ್ಯ ನಡೆಸಿದ್ದಾರೆ. ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯನ್ನು ಮುಂದುವರಿಸಿದ್ದಾರೆ.






