ರೀಲ್ಸ್ ಹುಚ್ಚಿಗೆ ಬಿದ್ದು ಮೊದಲ ರಾತ್ರಿ ವಿಡಿಯೋ ಹಂಚಿಕೊಂಡ ನವವಧು! ಜಾಲತಾಣಗಳಲ್ಲಿ ಸಂಚಲನ
Views: 189
ಕನ್ನಡ ಕರಾವಳಿ ಸುದ್ದಿ: ನವವಧು ತನ್ನ ಮದುವೆಯ ಮೊದಲ ರಾತ್ರಿಗೆ ಸಂಬಂಧಿಸಿದ ಅತ್ಯಂತ ಖಾಸಗಿ ವಿಚಾರಗಳನ್ನು ಅರೆಬೆತ್ತಲೆಯಾಗಿ, ಆಕ್ಷೇಪಾರ್ಹ ಭಂಗಿಗಳಲ್ಲಿ ವಿವರಿಸುತ್ತಾ ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾಳೆ. ಈ ವಿಡಿಯೋವನ್ನು ಆಕೆಯ ಪತಿಯೇ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದ್ದು, ಕೇವಲ 18 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 110 ಮಿಲಿಯನ್ (11 ಕೋಟಿ) ವೀಕ್ಷಣೆಗಳನ್ನು ಪಡೆದುಕೊಂಡು ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಅಶ್ಲೀಲ ಹಾಗೂ ಕೀಳುಮಟ್ಟದ ಕಂಟೆಂಟ್‌ಗಳು ಹರಿದಾಡುವುದು ಸಮಾಜದ ನೈತಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರಾತ್ರೋರಾತ್ರಿ ಪ್ರಸಿದ್ಧಿ ಗಳಿಸುವ ದುರಾಶೆಯಿಂದ ವೈಯಕ್ತಿಕ ಘನತೆಯನ್ನು ಹರಾಜಿಗಿಡುತ್ತಿರುವ ಇಂತಹ ಕೃತ್ಯಗಳು ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ.
ರೀಲ್ಸ್ ಹುಚ್ಚಿಗೆ ಬಿದ್ದು ಸಂಸ್ಕಾರ ಗೌರವವನ್ನು ಗಾಳಿಗೆ ತೂರುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ವಲಯ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಾಲತಾಣಗಳಲ್ಲಿ ಹರಡುವ ಇಂತಹ ಅಶ್ಲೀಲ ಕಂಟೆಂಟ್‌ಗಳನ್ನು ತಡೆಗಟ್ಟಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.






