23 ವರ್ಷದ ಯುವತಿ 80ರ ವೃದ್ಧನನ್ನು ಪ್ರೀತಿಸಿ ಮದುವೆ

Views: 328
ಜಾತಿ, ಅಂತಸ್ತು, ವಯಸ್ಸಿನ ಅಂತರವನ್ನೂ ಮೀರಿ ಅದೆಷ್ಟೋ ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ. ಅದರಲ್ಲೂ ಇತ್ತೀಚಿಗೆ ಯುವತಿಯರು ತಮಗಿಂತ 10 ರಿಂದ 20 ವರ್ಷ ಹೆಚ್ಚಿನ ವಯಸ್ಸಿನವರನ್ನು ಮದುವೆಯಾಗುವ ಕೆಲವೊಂದು ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬಳು 23 ವರ್ಷದ ಯುವತಿ 80 ರ ವೃದ್ಧನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಅಪರೂಪದ ಘಟನೆ ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದಿದ್ದು, 23 ವರ್ಷದ ಯುವತಿಯೊಬ್ಬಳು ವೃದ್ಧಾಶ್ರಮದಲ್ಲಿನ 80 ವರ್ಷದ ವೃದ್ಧನೊಂದಿಗೆ ಪ್ರೀತಿಯಲ್ಲಿ ಬಿದ್ದು ಆತನನ್ನೇ ಮದುವೆಯಾಗಿದ್ದಾಳೆ. ಹೆಬೈ ಪ್ರಾಂತ್ಯದ ವೃದ್ಧಾಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬಾಕೆ ಅಲ್ಲಿ ಲೀ ಎಂಬ 80 ರ ವೃದ್ಧನ ಪರಿಚಯವಾಗುತ್ತದೆ. ಆ ವೃದ್ಧನ ಪ್ರಬುದ್ಧತೆ, ಬುದ್ಧಿವಂತಿಕೆಗೆ ಆಕರ್ಷಿತಳಾದ ಕ್ಸಿಯಾಫಾಂಗ್ ಆತನ ಪ್ರೀತಿಯಲ್ಲಿ ಬೀಳುತ್ತಾಳೆ. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಕ್ಸಿಯಾಫಾಂಗ್ ತನ್ನ ಕುಟುಂಬದವರ ಬಳಿ ಹೇಳಿದಾಗ ಅವರು ಈಕೆಯ ಈ ನಿರ್ಧಾರಕ್ಕೆ ಒಪ್ಪಲಿಲ್ಲ. ನನಗೆ ಲೀ ಅವರೇ ಬೇಕೆಂದು ಹಠ ಹಿಡಿದ ಕ್ಸಿಯಾಫಾಂಗ್ ತನ್ನ ಕುಟುಂಬದೊಂದಿಗಿನ ಎಲ್ಲಾ ಸಂಬಂಧವನ್ನು ಮುರಿದು ಕೊನೆಗೆ ಲೀ ಅವರನ್ನು ವಿವಾಹವಾಗಿದ್ದಾಳೆ.






