ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವರ ಪೂಜಾ ಪರ್ಯಾಯ ಸರ್ತಿಯ ಹಸ್ತಾಂತರ

Views: 325
ಕುಂದಾಪುರ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ದೇವರ ಪೂಜಾ ಪರ್ಯಾಯ ಸರ್ತಿಯ ಹಸ್ತಾಂತರ ಜೂ.15 ರಂದು ನಡೆಯಿತು.
ಮುಂದಿನ ಜೂನ್ 15 .2025 ರವರೆಗಿನ ಪೂಜಾ ಜವಾಬ್ದಾರಿಯನ್ನು ಕೆ ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರಿಗೆ ಸಂಪ್ರದಾಯದಂತೆ ಪರ್ಯಾಯ ಹಸ್ತಾಂತರಿಸುವ ಕಾರ್ಯಕ್ರಮ ವಿದ್ವಾನ್ ಹೂವಿನಕೆರೆ ವಾದಿರಾಜ ಭಟ್ಟರು ಮತ್ತು ನೇರಂಬಳ್ಳಿ ಪ್ರಾಣೇಶ್ ತಂತ್ರಿಗಳು ಹಾಗೂ ಇತರ ವೈದಿಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜೂನ್ 15ರಂದು ನೆರವೇರಿತು.

ಈ ಹಿಂದೆ ಪರ್ಯಾಯ ಅರ್ಚಕರಾಗಿ ಪೂಜಾ ಕೈಂಕರ್ಯ ನಡೆಸುತ್ತಿದ್ದ ಶ್ರೀಶ ಉಪಾಧ್ಯಾಯ ಹಾಗೂ ಸಹೋದರರು, ಆಡಳಿತ ಧರ್ಮದರ್ಶಿ ಶ್ರೀ ರಮಣ ಉಪಾಧ್ಯಾಯ, ಧರ್ಮದರ್ಶಿ ಕೆ. ನಿರಂಜನ ಉಪಾಧ್ಯಾಯ, ಕೆ. ಪದ್ಮನಾಭ ಉಪಾಧ್ಯಾಯ, ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ಅರ್ಚಕ ಮಂಡಳಿಯ ಸದಸ್ಯರು ಉಪಾಧ್ಯಾಯ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.










