ಜನಮನ

ಕುಂದಾಪುರ ಖಾರ್ವಿಕೆರೆಯ ಚಿಪ್ಪು ಸಾಗಿಸುವ ದೋಣಿ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ

Views: 90

ಕುಂದಾಪುರ: ಇಲ್ಲಿನ ಖಾರ್ವಿಕೆರೆಯ ವೆಂಕಟೇಶ್ ಖಾರ್ವಿ ಮಾಲಕತ್ವದ ಬಾಲಾಜಿ ಹೆಸರಿನ ದೋಣಿ  ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಜೂನ್ 9ಕ್ಕೆ ಸಾಗಿಸಲಿದ್ದಾರೆ.

ಚಿಪ್ಪು ಸಾಗಿಸುವ 12 ವರ್ಷದ ಹಳೆಯದಾದ 50 ಅಡಿ ಉದ್ದ 10 ಅಡಿ ಅಗಲದ ದೋಣಿಯು ವೆಂಕಟೇಶ ಅವರು ಮನೆಯ ಸದಸ್ಯನಂತೆ ಇದ್ದು, ಮತ್ತು ಅವರ ಉದ್ಯೋಗದ ಒಂದು ಭಾಗವಾಗಿರುವ ಈ ದೊಡ್ಡ ದೋಣಿ ಇತ್ತೀಚಿಗೆ ಚಿಪ್ಪು ಸಂಗ್ರಹಿಸುವ ಕೆಲಸಗಾರರ ಕೊರತೆ ಅದರ ರಕ್ಷಣೆಗಾಗಿ ಗಾಳಿ, ಮಳೆ, ಬಿಸಿಲಿನ  ರಕ್ಷಣೆಗೆ ಅಸಾಧ್ಯ ಎಂಬುದನ್ನು ಗಮನಿಸಿ ಮೂರು ವರ್ಷದ ಹಿಂದೆ ಧರ್ಮಸ್ಥಳಕ್ಕೆ ಕೊಡುವುದಾಗಿ ನಿರ್ಧರಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಬೇಟಿಯಾಗಿ ಅವರು ಗಮನಕ್ಕೆ ತಂದು ಇದರ ಪೋಟೋ ನೋಡಿ ತುಂಬಾ ಖುಷಿಪಟ್ಟಿದ್ದಾರೆ. ಇದೇ ಜೂನ್ 9ಕ್ಕೆಬೆಳಿಗ್ಗೆ ಕುಂದಾಪುರ ಪಂಚಾಂಗಾವಳಿಯಿಂದ ಶಾಸ್ತ್ರಿ ವೃತ್ತದ ವರೆಗೆ ಅದ್ದೂರಿ ಮೆರವಣಿಗೆಯ ಮೂಲಕ ಸಾಗಿ ಅಲ್ಲಿಂದ  ಧರ್ಮಸ್ಥಳಕ್ಕೆ ಸಾಗಿಸಲಾಗುವುದೆಂದು ದೋಣಿಯ ಮಾಲಕ ವೆಂಕಟೇಶ್ ಖಾರ್ವಿ ತಿಳಿಸಿದ್ದಾರೆ.

12 ವರ್ಷದ ಹಿಂದೆ ಕೇವಲ 4 ಲಕ್ಷಕ್ಕೆ ತಯಾರಾದ ಈ ದೋಣಿ ಈಗ ತಯಾರು ಮಾಡಬೇಕಾದರೆ  7ರಿಂದ 8 ಲಕ್ಷ ಬೇಕಾಗುತ್ತದೆ.ಗಂಗೊಳ್ಳಿ, ಕೋಡಿ ಪಂಚಗಂಗಾವಳಿ ಸೇರುವ ಕುಂದಾಪುರದ ಬಬ್ಬುಕುದ್ರು ಹಿಂಬದಿಯಲ್ಲಿ  ಶೇಖರವಾಗಿರುವ ಚಿಪ್ಪನ್ನು ಸಣ್ಣ ದೋಣಿಯಲ್ಲಿ ಕೆಲಸಗಾರರಿಂದ 18 ರಿಂದ 20 ಅಡಿ ಆಳದಲ್ಲಿ ತೆಮಗೆ ಬಲೆ ಕಟ್ಟಿಕೊಂಡು ಸಂಗ್ರಹಿಸಿದ ನಂತರ ಚಿಪ್ಪನ್ನು ಇದೇ ದೋಣಿಯಲ್ಲಿ ದಿನಕ್ಕೆ 9 ಟನ್ ಸಂಗ್ರಹಿಸುತ್ತಿದ್ದಾರೆ.ಇದೀಗ ಬಾಲಾಜಿ ಹೆಸರಿನ ದೋಣಿ ಕುಂದಾಪುರದಿಂದ ವಿದಾಯಗೊಳ್ಳಲಿದೆ.

Related Articles

Back to top button
error: Content is protected !!