ಐಫೋನ್ ಬಳಕೆದಾರರಿಗೆ ಮ್ಯಾಕ್‌ಬುಕ್, ಐಪ್ಯಾಡ್ ಸೇರಿದಂತೆ ವಿಶನ್ ಪ್ರೊ ಹೆಡ್‌ಸೆಟ್ ಬಳಸುವುದು ಅಪಾಯಕಾರಿ ಯಾಕೆ?

Views: 28
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಸೇಫ್ ಅನ್ನೋ ಮಾತು ಇದೆ. ಇದೇ ಕಾರಣಕ್ಕೆ ಜನ ಐಫೋನ್ ಬಳಸಲು ಬಯಸುತ್ತಾರೆ. ಅದ್ರಲ್ಲೂ ಶ್ರೀಮಂತರು ತಮ್ಮ ಗೌಪ್ಯ ಮಾಹಿತಿಗಳನ್ನ ಕಾಪಾಡಿಕೊಳ್ಳಲು ಈ ರೀತಿಯಾಗಿ, ಐಫೋನ್ ಮೊರೆ ಹೋಗುತ್ತಾರೆ. ಹೀಗಿದ್ದಾಗ ಐಫೋನ್ ಭದ್ರತೆ ಕುರಿತು ಎಚ್ಚರಿಕೆ ಸಂದೇಶ ಒಂದು ರವಾನೆ ಆಗಿದೆ. ಹಾಗಾದರೆ ಏನದು ಎಚ್ಚರಿಕೆಯ ಸಂದೇಶ? ಐಫೋನ್ ಬಳಕೆದಾರರು, ಈ ಸುದ್ದಿಯನ್ನು ತಪ್ಪದೆ ಓದಬೇಕು ಗೊತ್ತಾ?
ಆ್ಯಪಲ್ ಕಂಪೆನಿಯ ಐಫೋನ್, ಮ್ಯಾಕ್‌ಬುಕ್, ಐಪ್ಯಾಡ್ ಸೇರಿದಂತೆ ವಿಶನ್ ಪ್ರೊ ಹೆಡ್‌ಸೆಟ್ ಬಳಸುವುದು ಅಪಾಯಕಾರಿ ಎಂಬ ಸಂದೇಶ ಹೊರಬಿದ್ದಿದೆ. ಇದರ ಜೊತೆಯಲ್ಲೇ ಹ್ಯಾಕರ್ಸ್ ಈ ಫೋನ್‌ಗಳ ಮೇಲೆ ಸುಲಭವಾಗಿ ದಾಳಿ ಮಾಡಬಹುದು ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಇದೀಗ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವು ಅಂದರೆ ಸಿಇಆರ್‌ಟಿ-ಇನ್, ಆ್ಯಪಲ್ ಉತ್ಪನ್ನಗಳ ಬಳಕೆದಾರರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದು. ಹ್ಯಾಕರ್ಸ್ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಎಚ್ಚರಿಸಲಾಗಿದೆ.
ಅಷ್ಟಕ್ಕೂ ಈ ಡಿವೈಸ್‌ಗಳಲ್ಲಿ ಇರುವ ಲೋಪ ಬಳಸಿಕೊಂಡು ಹ್ಯಾಕರ್ಸ್ ಸ್ಮಾರ್ಟ್ ಸಾಧನದ ಬಳಕೆದಾರ ನಿರ್ದಿಷ್ಟ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ವಂಚನೆ ಮಾಡಿ, ದಾರಿ ತಪ್ಪಿಸುತ್ತಾರೆ. ಈ ಮೂಲಕವಾಗಿ ಸ್ಮಾರ್ಟ್ ಸಾಧನದ ಮೇಲೆ ನಿಯಂತ್ರಣ ಸಾಧಿಸಬಲ್ಲರು ಎಂದು ಆರೋಪ ಮಾಡಲಾಗಿದೆ. ಹಾಗೇ ಯಾವೆಲ್ಲಾ ಮಾಡೆಲ್‌ನಲ್ಲಿ ಈ ರೀತಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು ಅನ್ನೋದನ್ನು ನೋಡುವುದಾದರೆ
ಐಫೋನ್ ಎಕ್ಸ್‌ಎಸ್, ಐಪ್ಯಾಡ್ ಪ್ರೊ (12.9 ಇಂಚು, 10.5 ಇಂಚು, 11 ಇಂಚು ಮಾದರಿ), ಐಪ್ಯಾಡ್ ಏರ್, ಐಪ್ಯಾಡ್ & ಐಪ್ಯಾಡ್ ಮಿನಿ ಸಾಧನಗಳಲ್ಲಿ ಐಒಎಸ್ ಮತ್ತು ಐಪ್ಯಾಡ್‌ಒಎಸ್ 17.4.1 ಕಾರ್ಯಾಚರಣೆ ಆವೃತ್ತಿ ಅಥವಾ ಅದಕ್ಕೂ ಹಿಂದಿನ ಆವೃತ್ತಿ ಹೊಂದಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಮೂಲಕ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ.
ಹಾಗೇ ಬಳಕೆದಾರರು ಸಾರ್ವಜನಿಕ ವೈ-ಫೈ ಸೌಲಭ್ಯ ಬಳಸಬಾರದು ಎಂಬ ಎಚ್ಚರಿಕೆ ಸಂದೇಶ ಕೂಡ ನೀಡಲಾಗಿದೆ. ಮತ್ತೊಂದು ಕಡೆ ಯಾವುದೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ಕೂಡ ನೀಡಲಾಗಿದೆ. ಹೀಗಾಗಿ, ಐಫೋನ್ ಬಳಕೆದಾರರು ಈಗ ಟೆನ್ಷನ್‌ನಲ್ಲಿ ಯೋಚನೆ ಮಾಡುವಂತಾಗಿದೆ.