ಧಾರ್ಮಿಕ
ಶ್ರೀ ಕ್ಷೇತ್ರ ಆನೆಗುಡ್ಡೆ ದೇವಳದಲ್ಲಿ ಹರಿಕತಾ ಸಾರಾಮೃತದ ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿ ಪ್ರವಚನ

Views: 21
ಕುಂದಾಪುರ: ಜ.15 ರಿಂದ 17ರ ತನಕ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಶ್ರೀ ಸತ್ಯನಾರಾಯಣ ಭವನದಲ್ಲಿ ಶ್ರೀಯುತ ವಿದ್ವಾನ್ ಅನಂತಕೃಷ್ಣ ಆಚಾರ್ಯ, ಉಡುಪಿ ಇವರಿಂದ ಹರಿಕತಾ ಸಾರಾಮೃತದ ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿ ಇದರ ಬಗ್ಗೆ ಪ್ರವಚನ ನಡೆಯಿತು.

ಜ.17ರಂದು ಮಂಗಳ ಕಾರ್ಯಕ್ರಮ ನಡೆದು ಶ್ರೀ ದೇವಳದ ವತಿಯಿಂದ ಆಡಳಿತ ದರ್ಮದರ್ಶಿ ಶ್ರೀ ರಮಣ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಶ್ರೀ ಶ್ರೀಷ ಉಪಾಧ್ಯಾಯ ಇವರು ವಿದ್ವಾಂಸರನ್ನು ಗೌರವಿಸಿದರು. ಈ ಜ್ಞಾನ ಸತ್ರದಲ್ಲಿ ಪಾಲ್ಗೊಂಡ ಭಕ್ತರೆಲ್ಲರಿಗೂ ಧನ್ಯವಾದ ಸಮರ್ಪಣೆ ಮಾಡುವ ಮೂಲಕ ಜ್ಞಾನ, ಭಕ್ತಿ, ವೈರಾಗ್ಯ ಸಿದ್ದಿಸುವುದರೊಂದಿಗೆ ಭಗವಂತನ ಪರಮಾನುಗ್ರಹವಾಗಲಿ ಎಂದು ಸಂದೇಶದಲ್ಲಿ ತಿಳಿಸಿದರು.






