ಕೋರ್ಟ್ ಕಟ್ಟುನಿಟ್ಟಿನ ಆದೇಶಕ್ಕೆ ತಲೆಬಾಗಿ ಕಟೀಲು ಯಕ್ಷಗಾನ ಕಾಲಮಿತಿಯಲ್ಲೇ ಮುಂದುವರಿಕೆ

Views: 78
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯ ಆರೂ ಮೇಳಗಳೂ ಕೋರ್ಟ್ ಕಟ್ಟುನಿಟ್ಟಿನ ಆದೇಶಕ್ಕೆ ತಲೆಬಾಗಿ ಕಟೀಲು ಯಕ್ಷಗಾನ ಪ್ರದರ್ಶನ ಕಾಲಮಿತಿಯಲ್ಲಿಯೇ ಮುಂದುವರಿಯಲಿದೆ.
ಜ.14ರಿಂದ ಆರು ಮೇಳಗಳು ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶಿಸುವ ಸಂಪ್ರದಾಯಕ್ಕೆ ಮರಳುತ್ತಿರುವುದಾಗಿ ಕೆಲವು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆ ನೀಡಿತ್ತು. ಆದರೆ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಯಕ್ಷಗಾನವನ್ನು ರಾತ್ರಿ ಇಡೀ ಪ್ರದರ್ಶಿಸುವಾಗ ಶಬ್ದಮಾಲಿನ್ಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅಂಶವನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು ಎಂದು ಜ. 10ರಂದು ಆದೇಶ ಹೊರಡಿಸಿದ್ದರು.
ರಾತ್ರಿ ಪೂರ್ತಿ ಯಕ್ಷಗಾನ ನಡೆಸುವಾಗ ಧ್ವನಿವರ್ಧಕ ಬಳಕೆಯಾದರೆ ಶಬ್ದಮಾಲಿನ್ಯ ಉಂಟಾ ಗುವ ಸಾಧ್ಯತೆ ಇದೆ ಎಂದು ಕಲಾವಿದರೂ ಯಕ್ಷಾಭಿಮಾನಿಗಳೂ ಭೀತಿ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಮೇಳದ ಕೆಲವು ಕಲಾವಿದರೂ ಕಾಲಮಿತಿ ಪದ್ಧತಿಯನ್ನೇ ಮುಂದು ವರಿಸಬೇಕು ಎಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದರು. ಈ ನಡುವೆ ಜ. 14ರಿಂದ ಪೂರ್ಣ ರಾತ್ರಿ ಆಟ ನಡೆಸುವುದೇ ಎಂದು ನಿರ್ಧರಿಸಿದ್ದ ಆಡಳಿತ ಮಂಡಳಿ ಯೋಚನೆ ಕೈಬಿಟ್ಟಿದೆ.






