ಧಾರ್ಮಿಕ

ಆನೆಗುಡ್ಡೆ ಶ್ರೀ ವಿನಾಯಕ ದೇವಳದಿಂದ ಉಡುಪಿ ಪರ್ಯಾಯ ಉತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಣೆ 

Views: 24

ಕುಂಭಾಸಿ: ಜ.12 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಳದಿಂದ ಜ. 18 ರಂದು ನಡೆಯುವ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿ ಹೊರೆ ಕಾಣಿಕೆ ಸಮರ್ಪಣೆಯನ್ನು ನಿವೃತ್ತ ಆಡಳಿತ ದರ್ಮದರ್ಶಿ ಶ್ರೀಯತ ಕೆ. ಸೂರ್ಯನಾರಾಯಣ ಉಪಾಧ್ಯಾಯರಿಂದ ಚಾಲನೆ ನೀಡಲಾಯಿತು.

ಆನೆಗುಡ್ಡೆ ಉಪಾಧ್ಯಾಯ ಕಟುಂಬದವರು ಹಾಗೂ ಅರ್ಚಕ ಬಂಧುಗಳು, ಆನೆಗುಡ್ಡೆ ಶ್ರೀ ವಿನಾಯಕ ದೇವರ ಅಭಿಮಾನಿ ಬಳಗ ಕುಂದಾಪುರ, ತೆಕ್ಕಟ್ಟೆ, ಕುಂಭಾಶಿ, ಗೋಪಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರರಿಂದ ಉಡುಪಿ ಶ್ರೀ ಕೃಷ್ಣನಿಗೆ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ದರ್ಮದರ್ಶಿಶ್ರೀ ಕೆ. ಶ್ರೀ ರಮಣ ಉಪಾಧ್ಯಾಯ, ದರ್ಮದರ್ಶಿ ಗಳಾದ ಶ್ರೀ ಕೆ. ವಿಠ್ಠಲ ಉಪಾಧ್ಯಾಯ, ಶ್ರೀ ಕೆ. ನಿರಂಜನ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಶ್ರೀ ಕೆ. ಶ್ರೀಷ ಉಪಾಧ್ಯಾಯ ಹಾಗೂ ಆನೆಗುಡ್ಡೆ ಅರ್ಚಕ ಮಂಡಳಿಯ ಸರ್ವ ಸದಸರು, ಕುಂದಪ್ರಭ ಸಂಪಾದಕರಾದ ಯು.ಎಸ್. ಶೆಣೈ, ಮಾಜಿ ಪುರಸಭಾ ಅದ್ಯಕ್ಷ ಹಾಗೂ ಕುಂದೇಶ್ವರ ದೇವಳದ ಆಡಳಿತ ದರ್ಮದರ್ಶಿ ಸತೀಶ ಶೆಟ್ಟಿ, ಧಾರ್ಮಿಕ ಮುಖಂಡ ಶಿವರಾಮ ಶೆಟ್ಟಿ, ನಿವೃತ್ತ ಅದ್ಯಾಪಕ ಉಮೇಶ ಮಾಸ್ತರ್ ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು.

Related Articles

Back to top button
error: Content is protected !!