ಇತರೆ
ಕುಂಭಾಸಿ:ಕಾರಿಗೆ ಬಸ್ಸು ಡಿಕ್ಕಿ ಪ್ರಯಾಣಿಕರು ಅಪಾಯದಿಂದ ಪಾರು

Views: 0
ಕುಂದಾಪುರ: ಇಲ್ಲಿನ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಎದುರು N.H. 66 ನಲ್ಲಿ ಮಂಗಳವಾರ ಬೆಳಗ್ಗೆ ಕಾರಿಗೆ ಬಸ್ಸು ಡಿಕ್ಕಿ ಹೊಡೆದು ಕಾರಿನ ಪ್ರಯಾಣಿಕರು ಸಣ್ಣ-ಪುಟ್ಟ ಗಾಯದಿಂದ ಪಾರಾಗಿದ್ದಾರೆ.

ಭಟ್ಕಳದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾರು ಕುಂಭಾಸಿ ಯಲ್ಲಿ ಹಾವೊಂದು ಅಡ್ಡ ಬಂದಿದ್ದರಿಂದ ಕಾರಿನ ಚಾಲಕ ಬ್ರೇಕ್ ಹಾಕಿದಾಗ ಹಿಂದಿನಿಂದ ಬಂದ ಬಸ್ಸು ಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬಾಗ ಮತ್ತು ಬಸ್ಸಿನ ಮುಂಬಾಗ ಅಲ್ಪಪ್ರಮಾಣದ ಡ್ಯಾಮೇಜ್ ಆಗಿದೆ.






