ಇತರೆ

ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಐವರು ನಾಪತ್ತೆ

Views: 0

ಶಿರಸಿ: ನದಿಯಲ್ಲಿ ಈಜಾಡಲು ಹೋಗಿದ್ದ ಒಂದೇ ಕುಟುಂಬದ ಐವರು ನಾಪತ್ತೆಯಾಗಿರೋ ಘಟನೆ ಸಹಸ್ರಲಿಂಗದಲ್ಲಿ ನಡೆದಿದೆ. ಈಜಾಡಲು ಹೋದ ಶಿರಸಿ ಕಸ್ತೂರಬಾ ನಗರ ಹಾಗೂ ರಾಮನಬೈಲಿನ ಐವರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ಶ್ರೀಮತಿ ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಉಮರ್ ಸಿದ್ದಿಕ್ ನೀರಿನಲ್ಲಿ ಕಾಣೆಯಾದವರು.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ನೀರುಪಾಲಾದವರನ್ನು ಹುಡುಕುತ್ತಿದ್ದಾರೆ. ಈ ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲಾಗಿದೆ.

Related Articles

Back to top button
error: Content is protected !!