ಆನೆಗುಡ್ಡೆ ಶ್ರೀ ವಿನಾಯಕ ಬ್ರಹ್ಮ ರಥೋತ್ಸವ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

Views: 1
ಕುಂಭಾಸಿ : ಎಲ್ಲ ಕಲೆಗಳು ಮತ್ತು ಕಲಾವಿದರಿಗೆ ಹಿಂದೆ ರಾಜಾಶ್ರಯವಿತ್ತು. ಈಗ ದೇವಸ್ಥಾನಗಳೇ ಕಲಾ ಪೋಷಣೆಯ ಕೇಂದ್ರಗಳಾಗಿವೆ. ಉತ್ಸವಗಳ ಪರ್ವ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯಗಳಲ್ಲಿ ಏರ್ಪಡಿಸುವುದರಿಂದ ದೇವರ ಸೇವೆ, ಮನರಂಜನೆ ಜೊತೆಗೆ ಕಲೆಗಳ ಪುನರುಜ್ಜೀವನಕ್ಕೂ ಕಾರಣವಾಗುತ್ತದೆ – ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಳದ ವಿಶ್ರಾಂತ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಬ್ರಹ್ಮ ರಥೋತ್ಸವದಂಗವಾಗಿ ನಡೆಯುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಶುಭ ಹಾರೈಸಿದರು.
ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಮಾತನಾಡಿ, ದೇವಳದ ವಾರ್ಷಿಕ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ವಿವಿಧೆಡೆಗಳಿಂದ ಭಕ್ತಾಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅವರಿಗೆ ಅನುಕೂಲತೆಗಳನ್ನು ಕಲ್ಪಿಸುವುದರೊಂದಿಗೆ ನಮ್ಮ ಶ್ರೀಮಂತ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವುದಕ್ಕಾಗಿ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಹೃದಯ ದಾನಿಗಳು ಪ್ರಾಯೋಜಕತ್ವ ವಹಿಸಿದರೆ ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಅನುವಾಗುತ್ತದೆ ಎಂದರು.
ಅನುವಂಶಿಕ ಪರ್ಯಾಯ ಅರ್ಚಕ ಕೆ. ಶ್ರೀಶ ಉಪಾಧ್ಯಾಯ ಶುಭ ಹಾರೈಸಿದರು.
ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು ಉಪಸ್ಥಿತರಿದ್ದರು. ದೇವಾಲಯದ ಮ್ಯಾನೇಜರ್ ನಟೇಶ್ ಕಾರಂತ ಸ್ವಾಗತಿಸಿ, ವಂದಿಸಿದರು.
ಬ್ರಹ್ಮರಥೋತ್ಸವ ಸಂಭ್ರಮ 2023
ಶ್ರೀ ಕ್ಷೇತ್ರದಲ್ಲಿ ದಿನಾಂಕ 16.12/203ನೇ ಶನಿವಾರ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದೆ
ದಿನಾಂಕ 13.12.2023 ರಿಂದ 17.12.2023ವರೆಗೆ ಧಾರ್ಮಿಕ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ 13.12 2023 ರಂದು ಸತ್ಯ ಗಣಪತಿ ವ್ರತ, ಗಣಹೋಮ, ಸ್ವಸ್ತಿ ವಾಚನ, ಉಪನಿಷತ್ ಹೋಮ, ಮಹಾಪೂಜೆ,ರಾತ್ರಿ -ರಂಗ ಪೂಜೆ, ಡೋಲಾರೋಹಣ, ಪಲ್ಲಕ್ಕಿ ಉತ್ಸವ.
ಸಂಜೆ 5:30 ರಿಂದ ಕೋಲಾಟ, ಭಜನಾ ನೃತ್ಯ, ಜಾನಪದ ನೃತ್ಯ,ರಾತ್ರಿ 7 ಕ್ಕೆ ಯಕ್ಷಗಾನ ‘ಕನಕಾಂಗಿ ಕಲ್ಯಾಣ’
ದಿನಾಂಕ 14.12.2023 ರಂದು ಪೂರ್ವಾಹ್ನ ಉಪನಿಷತ್, ಕಲಾಶಭಿಷೇಕ, ಗಣಹೋಮ,ಸತ್ಯ ಗಣಪತಿ ವ್ರತ, ರಾತ್ರಿ- ಪುರ ಮೆರವಣಿಗೆ, ರಂಗ ಪೂಜೆ, ಪಲ್ಲಕ್ಕಿ ಉತ್ಸವ
ಸಂಜೆ 5:30ಕ್ಕೆ ಭರತನಾಟ್ಯ, ರಾತ್ರಿ- 7:30ಕ್ಕೆ ‘ಭಕ್ತಿ ಭಾವ ಸುಗಮ ಸಂಗೀತ’
ದಿನಾಂಕ 15 12 2023 ರಂದು ನವಕ ಪ್ರಧಾನ ಕಲಾಭಿಷೇಕ, ಅಗ್ನಿ ಜನನ, ಗಣ ಹೋಮ, ರಾತ್ರಿ- ಪುರ ಮೆರವಣಿಗೆ, ರಂಗ ಪೂಜೆ, ಸುವರ್ಣ ಪಲ್ಲಕ್ಕಿ ಉತ್ಸವ
ಸಂಜೆ -6ಕ್ಕೆ ‘ಮ್ಯಾಜಿಕ್ ವಿಸ್ಮಯ ಹಾಗೂ ಮನೋರಂಜನೆ ಜಾದೂ’ ಕಾರ್ಯಕ್ರಮ
ದಿನಾಂಕ 16 12 23 ರಂದು ‘ಅಷ್ಟೋತ್ತರ ಸಹಸ್ರ ನಾಳಿಕೆರ ಗಣ ಯಾಗ’ ಮತ್ತು ‘ಬ್ರಹ್ಮರಥೋತ್ಸವ’ ಭಜಕರಿಂದ ಪಾನಕ ವಿತರಣೆ, ಅನ್ನ ಸಂತರ್ಪಣೆ ರಾತ್ರಿ-7ಕ್ಕೆ ‘ರಥೋತ್ಸವ’ ಸುಡುಮದ್ದು ಪ್ರದರ್ಶನ
ಸಂಜೆ 5ರಿಂದ ಸ್ಯಾಕ್ಸೋ ಫೋನ್ ವಾದನರಾತ್ರಿ 9:30ಕ್ಕೆ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ
ದಿನಾಂಕ 17.12.2023 ಚೂರ್ಣೋತ್ಸವ ಉತ್ಸವ ವಸಂತರಾಧನೆ ಮಂತ್ರಾಕ್ಷತೆ
ಶ್ರೀ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಶ್ರೀ ಕೆ ಶ್ರೀರಮಣ ಉಪಾಧ್ಯಾಯ ಅನುವಂಶಿಕ ಆಡಳಿತ ಧರ್ಮದರ್ಶಿ
ಶ್ರೀ ಕೆ ಶ್ರೀಶ ಉಪಾಧ್ಯಾಯ ಅನುವಂಶಿಕ ಪರ್ಯಾಯ ಅರ್ಚಕರು
ಶ್ರೀ ಕೆ ವಿಠಲ ಉಪಾಧ್ಯಾಯ ಅನುವಂಶಿಕ ಧರ್ಮದರ್ಶಿ
ಶ್ರೀ ಕೆ ನಿರಂಜನ ಉಪಾಧ್ಯಾಯ ಅನುವಂಶಿಕ ಧರ್ಮದರ್ಶಿ
Address
Aanegudde Shri Vinayaka temple kumbasi 576257 kundapura taluk Udupi district
Contact office 7406093 533
Ph 9480272221
Karnataka Bank kumbasi 4152500100097901
IFSC KARB0000415















