ಮಾಹಿತಿ ತಂತ್ರಜ್ಞಾನ

ಆನ್ ಲೈನ್ ಜಾಲ: ಆಮಿಷಕ್ಕೆ ಒಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಗೃಹಿಣಿಯ ಗೋಳು!

Views: 3

ಇತ್ತೀಚ್ಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಯನ್ನ ಸೃಷ್ಟಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು, ಬೆಂಗಳೂರಿನಲ್ಲೂ ಇಂತಹ ಒಂದು ಘಟನೆ ನಡೆದಿದೆ.

ನನ್ನ ಗಂಡ ಉದ್ಯಮಿ, ನಾನು ಗೃಹಿಣಿ. ಫೇಸ್‌ಬುಕ್‌ನಲ್ಲಿ 2023ರ ಫೆಬ್ರುವರಿಯಲ್ಲಿ ಕೆಲ್ಲಿ ಜಾನ್ಸನ್ ಹೆಸರಿನ ಖಾತೆಯಿಂದ ರಿಕ್ವೆಸ್ಟ್ ಬಂದಿತ್ತು. ‘ಲಂಡನ್ ವೈದ್ಯ’ ಎಂಬುದು ‘ಬಯೋ’ದಲ್ಲಿತ್ತು. ಹೀಗಾಗಿ ವೈದ್ಯನಾಗಿರಬಹುದೆಂದು ತಿಳಿದು ರಿಕ್ವೆಸ್ಟ್ ಸ್ವೀಕರಿಸಿದ್ದೆ.

ರಿಕ್ವೆಸ್ಟ್‌ ಸ್ವೀಕರಿಸಿದ ಮರು ದಿನವೇ ಜಾನ್ಸನ್ ಎಂಬುವವನಿಂದ ‘ಹಾಯ್’ ಸಂದೇಶ ಬಂದಿತ್ತು. ಅದಕ್ಕೆ ನಾನೂ ಪ್ರತಿಕ್ರಿಯಿಸಿದ್ದೆ. ‘ನಾನು ಲಂಡನ್‌ನಲ್ಲಿ ವೈದ್ಯನಾಗಿದ್ದೇನೆ. ಭಾರತವೆಂದರೆ ನನಗೆ ಅಚ್ಚುಮೆಚ್ಚು. ನಿಮ್ಮ ಸ್ನೇಹ ಸಿಕ್ಕಿದ್ದಕ್ಕೆ ಖುಷಿಯಾಯಿತು’ ಎಂದಿದ್ದ. ಆತನ ಮಾತು ಕೇಳಿ ನಾನು ‘ಧನ್ಯವಾದಗಳು’ ಎಂದು ನಾನು ಹೇಳಿದ್ದೆ.

ಇದಾದ ನಂತರ, ನಮ್ಮಿಬ್ಬರ ಚಾಟಿಂಗ್ ಮುಂದುವರಿಯಿತು. ಪರಸ್ಪರ ಫೋಟೊ ಸಹ ವಿನಿಮಯ ಮಾಡಿಕೊಂಡೆವು. ಆತ, ಆಸ್ಪತ್ರೆಯಲ್ಲಿದ್ದ ಹಾಗೂ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿದ್ದ ಫೋಟೊಗಳನ್ನು ಕಳುಹಿಸಿದ್ದ. ಅವುಗಳನ್ನು ನೋಡಿ, ಆತ ವೈದ್ಯನಾಗಿರಬಹುದೆಂದು ನಾನು ಹೆಚ್ಚಾಗಿ ನಂಬಿದೆ. ಇಬ್ಬರಿಗೂ ಪರಿಚಯವಾಗಿ 15 ದಿನವಾಗಿತ್ತು. ಆದರೆ, ಈ ವಿಷಯವನ್ನು ನಾನು ನನ್ನ ಗಂಡನಿಗೆ ಹೇಳಿರಲಿಲ್ಲ

ನೀನು ನನ್ನ ನೆಚ್ಚಿನ ಸ್ನೇಹಿತೆ. ನಿನಗೆ ಉಡುಗೊರೆ ನೀಡಬೇಕು ಎಂದಿದ್ದ. ಜೊತೆಗೆ. ನನ್ನ ಮನೆಯ ವಿಳಾಸವನ್ನು ಪಡೆದುಕೊಂಡಿದ್ದ. ಚಿನ್ನದ ಸರಗಳು, ಕೈ ಗಡಿಯಾರ, ಓಲೆಗಳು, ಬಟ್ಟೆ, ಚಪ್ಪಲಿಗಳು ಹಾಗೂ ಇತರೆ ವಸ್ತುಗಳು ಡಿ ಬಾಕ್ಸ್‌ನಲ್ಲಿದ್ದ ಫೋಟೊವನ್ನು ಆತ ನನಗೆ ಕಳುಹಿಸಿದ್ದ. ‘ಇದೆಲ್ಲವೂ ನಿನಗಾಗಿ. ಸದ್ಯದಲ್ಲೇ ನಿನ್ನ ಮನೆಗೆ’ ಎಂದಿದ್ದ. ಆತನ ಮಾತು ಕೇಳಿ ಖುಷಿಯಾಗಿದ್ದೆ. ಉಡುಗೊರೆಗಾಗಿ ಕಾಯುತ್ತಿದ್ದೆ ಎಂದು ನೊಂದ ಗೃಹಿಣಿ ಹೇಳಿದ್ದಾಳೆ.

ಇನ್ನೂ ನಾಲ್ಕು ದಿನಗಳ ನಂತರ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ನಿಮ್ಮ ಲಂಡನ್ ಸ್ನೇಹಿತ ಕೆಲ್ಲಿ ಜಾನ್ಸನ್, ಉಡುಗೊರೆ ಬಾಕ್ಸ್ ಕಳುಹಿಸಿದ್ದಾರೆ. ಅದರಲ್ಲಿ ಚಿನ್ನದ ಅಭರಣ ಹಾಗೂ ದುಬಾರಿ ವಸ್ತುಗಳಿವೆ.

ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿಯೇ ನಕಲಿ ವಾಟ್ಸ್ಆ್ಯಪ್ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಟ್ಟ ಸೈಬರ್ ದಂಧೆಕೋರರುಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿಯೇ ನಕಲಿ ವಾಟ್ಸ್ಆ್ಯಪ್ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಟ್ಟ ಸೈಬರ್ ದಂಧೆಕೋರರು

ಅವುಗಳನ್ನು ನಿಮ್ಮ ವಿಳಾಸಕ್ಕೆ ಕಳುಹಿಸಬೇಕಾದರೆ, ಮೊದಲಿಗೆ ಕಸ್ಟಮ್ ಶುಲ್ಕ ಪಾವತಿಸಬೇಕು ಎಂದಿದ್ದ. ಅದನ್ನು ನಂಬಿ. ಆತ ಹೇಳಿದ್ದ ಖಾತೆಗೆ ಆರಂಭದಲ್ಲಿ 25 ಸಾವಿರ ಹಾಕಿದ್ದೆ. ಇದಾದ ಕೆಲ ಗಂಟೆಗಳ ಬಳಿಕ ಕರೆ ಮಾಡಿದ್ದ ಮತ್ತೊಬ್ಬ, ‘ನಿಮ್ಮ ಉಡುಗೊರೆ ಬಾಕ್ಸ್ ಬೆಂಗಳೂರಿಗೆ ಕಳುಹಿಸಲಾಗುವುದು. ಇದಕ್ಕಾಗಿ ಕೋರಿಯ‌ರ್ ಹಾಗೂ ಕಸ್ಟಮ್ ಶುಲ್ಕ ಪಾವತಿಸಬೇಕು ಎಂದಿದ್ದ. ಅದನ್ನೂ ನಂಬಿ ನಾನು ಮತ್ತೆ 25 ಸಾವಿರ ಜಮೆ ಮಾಡಿದ್ದೆ.

ಅಲ್ಲದೇ ಕೆಲ್ಲಿ ಜಾನ್ಸನ್ ಕಳುಹಿಸಿದ್ದ ಬಾಕ್ಸ್ ಫೋಟೊಗಳನ್ನು ಪುನಃ ಕಳುಹಿಸಿದ್ದ ಯುವತಿಯೊಬ್ಬಳು, ‘ನಾನು ಕಸ್ಟಮ್ಸ್ ಅಧಿಕಾರಿ. ನಿಮ್ಮ ಬಾಕ್ಸ್ ತೆರೆದು ನೋಡಲಾಗಿದೆ. ದುಬಾರಿ ಬೆಲೆಯ ಚಿನ್ನಾಭರಣ ಹಾಗೂ ವಸ್ತುಗಳಿವೆ. ನಿಮ್ಮ ಸ್ನೇಹಿತ ಕೆಲ್ಲಿ ಜಾನ್ಸ್ ಯಾವುದೇ ಕಸ್ಟಮ್ಸ್ ಶುಲ್ಕ ಪಾವತಿ ಮಾಡಿಲ್ಲ

ನೀವು ಭಾರತದ ತೆರಿಗೆ ಪಾವತಿ ಮಾಡಬೇಕು. ಅವಾಗಲೇ ಈ ಬಾಕ್ಸ್ ನಿಮ್ಮ ಮನೆಗೆ ಕಳುಹಿಸುತ್ತೇವೆ’ ಎಂದಿದ್ದಳು. ಅವಳ ಮಾತು ನಂಬಿ, ನಾನು ಹಂತ ಹಂತವಾಗಿ 4.80 ಲಕ್ಷ ಕಳುಹಿಸಿದ್ದೆ. ಇದಾದ ನಂತರವೂ ನನಗೆ ಬಾಕ್ಸ್ ಬರಲಿಲ್ಲ.

ಅದೇ ಯುವತಿ ಪುನಃ ಕರೆ ಮಾಡಿ, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಮ್ಮ ಬಾಕ್ಸ್ ಸಿಲುಕಿಕೊಂಡಿದೆ. ಸ್ಥಳೀಯ ಶುಲ್ಕ ಪಾವತಿ ಮಾಡಿದರೆ ಮಾತ್ರ ಬಾಕ್ಸ್ ನಿಮ್ಮ ವಿಳಾಸಕ್ಕೆ ಬರುತ್ತದೆ ಎಂದಿದ್ದಳು. ಆದರೆ, ಆ ಯುವತಿ ಮಾತನಿಂದ ನನಗೆ ಅನುಮಾನ ಬಂದು ನನ್ನ ಗಂಡನಿಗೆ ಈ ವಿಷಯವನ್ನ ತಿಳಿಸಿದೆ.

ನನ್ನ ಪತಿ ಹೇಳುವವರೆಗೂ ನನಗೆ ವಂಚನೆ ಜಾಲದ ಅರಿವು ನನಗಿರಲಿಲ್ಲ. ನಂತರ, ಪತಿ ಜೊತೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದೇನೆ. ಹಣ ಪಡೆದ ನಂತರ, ಕೆಲ್ಲಿ ಜಾನ್ಸನ್ ಎಂಬಾತ ತನ್ನ ಖಾತೆಯನ್ನೇ ಅಳಿಸಿ ಹಾಕಿದ್ದಾನೆ. ಆತ ಯಾರು? ಎಂಬುದು ಇದುವರೆಗೂ ಗೊತ್ತಾಗಲಿಲ್ಲ

ವಂಚನೆ ಉದ್ದೇಶದಿಂದ ಆತ, ನಕಲಿ ಖಾತೆ ಸೃಷ್ಟಿಸಿದ್ದನೆಂದು ಪೊಲೀಸರು ಹೇಳುತ್ತಿದ್ದಾರೆ. ಆ ಸ್ನೇಹಿತ ಯಾರು? ನನಗೆ ಏಕೆ ರಿಕ್ವೆಸ್ಟ್ ಕಳುಹಿಸಿದ್ದಾನೆ ? ಆತನ ಉದ್ದೇಶವೇನು ? ದುಬಾರಿ ಉಡುಗೊರೆ ನನಗೆ ಏಕೆ ಕಳುಹಿಸುತ್ತಾನೆ? ಎಂಬ ಬಗ್ಗೆ ಯೋಚಿಸುವುದೇ ಇಲ್ಲ.

ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಬೇಕೆಂದು ಈಗ ಅರಿವಾಗಿದೆ ಎಂದು ನೊಂದ ಮಹಿಳೆ ಹೇಳಿದ್ದಾರೆ.

Related Articles

Back to top button