ಇತರೆ

7ನೇ ತರಗತಿ ವಿದ್ಯಾರ್ಥಿನಿಗೆ ತಾಯಿ ತನ್ನ ತಮ್ಮನಿಗೆ ಬಲವಂತವಾಗಿ ಮದುವೆ! 

Views: 403

ಕನ್ನಡ ಕರಾವಳಿ ಸುದ್ದಿ: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದಿದರೂ ಅಮಾನವೀಯ ಘಟನೆಗಳಿಗೇನೂ ಕಡಿಮೆಯಿಲ್ಲ. ಅದರಲ್ಲೂ ಬಾಲ್ಯವಿವಾಹ ಪದ್ಧತಿಯಂತಹ ಪಿಡುಗೂ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯ. 7ನೇ ತರಗತಿಯ ವಿದ್ಯಾರ್ಥಿನಿಗೆ ಬಲವಂತವಾಗಿ ತಾಯಿಯೇ ಬಾಲ್ಯವಿವಾಹ ಮಾಡಿರುವ ಅಮಾನವೀಯ ಘಟನೆ ತಮಿಳುನಾಡು ಕರ್ನಾಟಕದ ಗಡಿ ಭಾಗ ಹೊಸೂರಿನಲ್ಲಿ ನಡೆದಿದೆ ನಡೆದಿದೆ.

7ನೇ ತರಗತಿ ಓದುತ್ತಿದ್ದ ಮಗಳಿಗೆ ತಾಯಿಯೇ ಬಲವಂತವಾಗಿ ತನ್ನ ತಮ್ಮನ ಜೊತೆ ವಿವಾಹ ಮಾಡಿದ್ದಾಳೆ. ಮದುವೆ ಕಾರ್ಯದ ಬಳಿಕ ಮನೆಗೆ ಬಂದ ಬಾಲಕಿ ಗಂಡನ ಮನೆಗೆ ಹೋಗಲು ಒಪ್ಪಿಲ್ಲ. ಇದಕ್ಕೆ ಬಾಲಕಿಯ ತಾಯಿಯ ತಮ್ಮ ಅಂದರೆ ಬಾಲಕಿ ಪತಿ ಆಕೆಯನ್ನು ಎಳೆದುಕೊಂಡು ಭುಜದ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.

ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕಿ ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿದ್ದರೂ ಕೇಳದೇ ದುರುಳ ಆಕೆಯನ್ನು ಹೊತ್ತುಕೊಂಡು ಹೋಗಿದ್ದಾನೆ. ಕಾಲಿಕುಟ್ಟೈ ಮಾತೇಶ್ (30) ಎಂಬಾತ 14 ವರ್ಷದ ಬಾಲಕಿಯನ್ನು ವಿವಾಹವಾಗಿ ಹೊತ್ತೊಯ್ದಿದ್ದಾನೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Back to top button