ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Views: 655
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಜುಲೈ 25 ರಂದು ಆಚರಿಸಲಾಯಿತು.
ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ. ಎಸ್.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಬದುಕು,ನಡೆ-ನುಡಿಯು ಪ್ರಾದೇಶಿಕ ಭಾಷಾ ಸಂಸ್ಕೃತಿಯ ಪ್ರತಿರೂಪವಾಗಿರುತ್ತದೆ. ಕುಂದಾಪ್ರ ಭಾಷೆ ಎನ್ನುವುದು ವಿಶ್ವದಾದ್ಯಂತ ಹಬ್ಬಿ ನಮ್ಮ ನೆಲದ ಶ್ರೀಮಂತಿಕೆಯನ್ನು ಪರಿಚಯಿಸಿದ್ದಲ್ಲದೆ, ನಮ್ಮ ಗತಕಾಲದ ಸಂಸ್ಕೃತಿ
ಯ ಬದುಕನ್ನು ಅನಾವರಣಗೊಳಿಸುತ್ತಿದೆ.
ಅಚ್ಚುಕಟ್ಟಾಗಿರುವ ನಮ್ಮ ಕುಂದಾಪ್ರ ಭಾಷೆಯು
ಕೇಳುವುದಕ್ಕೂ ಹಿತ ಮತ್ತು ಪಾಲಿಸುವುದಕ್ಕೂ ಅನುಕರಣೀಯ ಎಂದರು.
ವಿದ್ಯಾರ್ಥಿಗಳಾದ ಅಶ್ವಿತ, ಮನಸ್ವಿ,ಪ್ರೀತಮ್,ಪ್ರಥಮ್, ಪ್ರಾಪ್ತಿ, ಮಾನ್ಯ,ಹಿಮಾಂಶು ಮತ್ತು ತ್ರಿಶಾ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಡಾ.ರೂಪಾ ಶಣೈಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕುಮಾರಿ ಅವನಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ,ಅಂತಿಮವಾಗಿ ವಂದಿಸಿದರು.






